ಕಡಬ ಎಸ್ಎಸ್ಎಲ್ ಸಿ ವಿಧ್ಯಾರ್ಥಿ ನೇಣಿಗೆ ಶರಣು

ಕಡಬ ಮೇ 21: ಕಡಬದಲ್ಲಿ 10ನೇ ತರಗತಿಯ ವಿಧ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಬಾಲಕನನ್ನು ಕೊಂಬಾರುಗದ್ದೆ ನಿವಾಸಿ ತಿಮ್ಮಪ್ಪ ಗೌಡರ ಪುತ್ರ ನಂದನ್ (16) ಎಂದು ಗುರುತಿಸಲಾಗಿದೆ.

ನಂದನ್ ಹತ್ತನೇ ತರಗತಿಯಲ್ಲಿ ಓದುತ್ತಿದ್ದು ಗುರುವಾರ ಮುಂಜಾನೆ ತನ್ನ ಮನೆಯ ಸಮೀಪದ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಕಡಬ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆಸಲಾಗಿದೆ.