Connect with us

LATEST NEWS

ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಚೇತರಿಕೆಗೆ ವಿಶೇಷ ಪೂಜೆ

ಮಂಗಳೂರು ಜುಲೈ 8: ಕೊರೊನಾ ಹಿನ್ನಲೆ ಆಸ್ಪತ್ರೆಗೆ ದಾಖಲಾಗಿರುವ ಕಾಂಗ್ರೇಸ್ ಹಿರಿಯ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಶೀಘ್ರ ಕೊರೊನಾ ಸೋಂಕು ಮುಕ್ತರಾಗಲಿ ಎಂದು ಪ್ರಾರ್ಥಿಸಿ ಕುದ್ರೋಳಿ ಗೋಕರ್ಣನಾಥ ದೇವರಿಗೆ 109 ಸೀಯಾಳಾಭಿಷೇಕವನ್ನು ಇಂದು ನೆರವೇರಿಸಲಾಯಿತು.


ಮಾಜಿ ಕೇಂದ್ರ ಸಚಿವ ಪೂಜಾರಿ ಹಾಗೂ ಅವರ ಕುಟುಂಬಸ್ಥರಲ್ಲಿ ಕೊರೊನಾ ಸೋಂಕು ದೃಢಗೊಂಡಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕುದ್ರೋಳಿ ದೇವಳ, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಜನಾರ್ದನ ಪೂಜಾರಿಯವರ ಅಭಿಮಾನಿಗಳ ವತಿಯಿಂದ ಸೀಯಾಳಾಭಿಷೇಕ ಹಾಗೂ ಮಹಾಪೂಜೆ ನೆರವೇರಿತು.

 

Facebook Comments

comments