DAKSHINA KANNADA
ಜರ್ಮನಿ ಪಾರ್ಲಿಮೆಂಟ್ ಪುಸ್ತಕದಲ್ಲಿ ಸ್ಪೀಕರ್ ಯು.ಟಿ.ಖಾದರ್ ಸಹಿ, ಇದೊಂದು ಐತಿಹಾಸಿಕ ಮೈಲಿಗಲ್ಲು ಎಂದ ಜರ್ಮನ್ ಅಸೆಂಬ್ಲಿ ಅಧ್ಯಕ್ಷ ಐಲ್ಸ್ ಏಗ್ನರ್..!
ಬರ್ಲಿನ್ : ಜರ್ಮನ್ ಪ್ರವಾಸದಲ್ಲಿರುವ ಕರ್ನಾಟಕ ಸ್ಪೀಕರ್ ಯು.ಟಿ.ಖಾದರ್ (U T Khader) ಮತ್ತು ಅವರ ನಿಯೋಗ ಬುಧವಾರ ಜರ್ಮನಿಯ ಮ್ಯೂನಿಚ್ ನಲ್ಲಿರುವ ಬವೇರಿಯನ್ ಸ್ಟೇಟ್ ಪಾರ್ಲಿಮೆಂಟ್ ಗೆ ಭೇಟಿ ನೀಡಿ ಅಲ್ಲಿನ ಪಾರ್ಲಿಮೆಂಟ್ ವಿಚಾರಗಳನ್ನು ತಿಳಿದುಕೊಂಡಿತು. ಈ ಸಂದರ್ಭ ಪಾರ್ಲಿಮೆಂಟ್ ವಿಐಪಿ ಭೇಟಿದಾರರ ಪುಸ್ತಕದಲ್ಲಿ ಯು.ಟಿ.ಖಾದರ್ ಸಹಿ ಮಾಡುವ ಮೂಲಕ ಇತಿಹಾಸ ಬರೆದರು.
ಬವೇರಿಯನ್ ಸ್ಟೇಟ್ ಪಾರ್ಲಿಮೆಂಟ್ ಅಧ್ಯಕ್ಷ ಐಲ್ಸ್ ಏಗ್ನರ್ (Ilse Aigner) ಇದೊಂದು ಐತಿಹಾಸಿಕ ಮೈಲಿಗಲ್ಲು ಎಂದು ಬಣ್ಣಿಸಿದರು. ಯು.ಟಿ.ಖಾದರ್ ಅವರ ಜೊತೆಗೆ ವಿಧಾನಸಭಾ ಉಪಸಭಾಪತಿ ರುದ್ರಪ್ಪ ಲಮಾಣಿ, ಶಾಸಕರಾದ ಉಮಾನಾಥ ಕೋಟ್ಯಾನ್, ಅಶೋಕ್ ಕುಮಾರ್ ರೈ, ಮಹಾಂತೇಶ ಕೌಜಲಗಿ ಉಪಸ್ಥಿತರಿದ್ದರು.
2025 ಫೆಬ್ರವರಿಯಲ್ಲಿ ಜರ್ಮನಿ ಪಾರ್ಲಿಮೆಂಟ್ ನಿಯೋಗ ಕರ್ನಾಟಕಕ್ಕೆ ಭೇಟಿ
ಕರ್ನಾಟಕ ವಿಧಾನಸಭೆಗೆ ಜರ್ಮನಿ ಪಾರ್ಲಿಮೆಂಟ್ ನಿಯೋಗವು 2025 ಫೆಬ್ರವರಿಯಲ್ಲಿ ಭೇಟಿ ನೀಡಲಿದೆ ಎಂದು ಕರ್ನಾಟಕ ಸ್ಪೀಕರ್ ಯು.ಟಿ.ಖಾದರ್ ಬುಧವಾರ ತಿಳಿಸಿದ್ದಾರೆ. ಬವೇರಿಯನ್ ಸ್ಟೇಟ್ ಪಾರ್ಲಿಮೆಂಟ್ ಅಧ್ಯಕ್ಷ ಐಲ್ಸ್ ಏಗ್ನರ್ ಅವರು ಜರ್ಮನಿ ಪ್ರವಾಸದಲ್ಲಿರುವ ಕರ್ನಾಟಕ ಸ್ಪೀಕರ್ ಅವರ ನಿಯೋಗದ ಜೊತೆಗೆ ಚರ್ಚಿಸಿ ಭಾರತದ ಪ್ರಜಾಪ್ರಭುತ್ವ, ಭೌಗೋಳಿಕ ಹಾಗೂ ಸಂಸದೀಯ ಇತಿಹಾಸದ ಕುರಿತು ಮಾಹಿತಿ ಪಡೆದರು.
ಈ ಸಂದರ್ಭ ನಿಯೋಗಕ್ಕೆ ಅವರು ಸೌಹಾರ್ದ ಔತಣಕೂಟ ಏರ್ಪಡಿಸಿದರು. ನಿಯೋಗವು ಜರ್ಮನಿ ಪ್ರತಿನಿಧಿಗಳನ್ನು ರಾಜ್ಯಕ್ಕೆ ಆಹ್ವಾನಿಸಿತು. ಯು.ಟಿ.ಖಾದರ್ ಅವರ ಜೊತೆಗೆ ವಿಧಾನಸಭಾ ಉಪಸಭಾಪತಿ ರುದ್ರಪ್ಪ ಲಮಾಣಿ, ಶಾಸಕರಾದ ಉಮಾನಾಥ ಕೋಟ್ಯಾನ್, ಅಶೋಕ್ ಕುಮಾರ್ ರೈ, ಮಹಾಂತೇಶ ಕೌಜಲಗಿ ಇದ್ದರು.
You must be logged in to post a comment Login