ಮಂಗಳೂರು, ಜನವರಿ 22: ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಂಗಳೂರು ಸೌತ್ ಕೆನರಾ ಫೋಟೋ ಗ್ರಾಫರ್ ಅಸೋಸಿಯೇಷನ್ (ರಿ) ನ ಪದ ಪ್ರದಾನ ಸಮಾರಂಭ ಜ.೨೦ ರಂದು ಸೈಟ್ ಸೆಬಾಸ್ಟಿಯನ್ ಹಾಲ್ ನಲ್ಲಿ ನಡೆಯಿತು.
ನೂತನ ಪದಾಧಿಕಾರಿಗಳ ಪದ ಪ್ರದಾನ ಅದ್ದೂರಿಯಾಗಿ ಎಸ್ ಕೆ ಪಿ ಎ ಲಾಂಛನ ನೀಡುವ ಮೂಲಕ ನೂತನ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಯವರಿಗೆ ಅಧಿಕಾರ ಹಸ್ತಾಂತರ ಮಾಡಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ದಕ್ಷಿಣ ವಿಧಾನಸಭಾ ಶಾಸಕ ವೇದವ್ಯಾಸ ಕಾಮತ್ ಉದ್ಘಾಟಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕರು ನೂತನವಾಗಿ ಪದಗ್ರಹಣ ವಾದ ಸದಸ್ಯರಿಗೆ ವಿಶೇಷವಾದ ಶುಭಾಶಯ ಕೋರಿದರು. ಛಾಯಾಗ್ರಾಹಕರು ಎಲ್ಲಾ ಕ್ಷಣವನ್ನು ನೆನಪಿಸುವ ಕೆಲಸ ಮಾಡುವವರು, ಈ ರೀತಿಯ ಅಮೂಲ್ಯ ಕೆಲಸವನ್ನು ಮಾಡುವ ಎಲ್ಲ ಛಾಯಾಗ್ರಾಹಕರಿಗೂ ನನ್ನ ಧನ್ಯವಾದಗಳು.
ಛಾಯಾಗ್ರಾಹಕ ಎಂದರೆ ಸಮಯಕ್ಕೆ ಮಹತ್ವ ನೀಡುವವರು, ಅಷ್ಟೇ ಅಲ್ಲದೆ ಗ್ರಾಹಕನ್ನು ಸ್ನತೃಪ್ತಿ ಪಡಿಸುವುದು ಛಾಯಾಗ್ರಾಹಕ. ಅಸಂಘಟಿತ ಕಾರ್ಮಿಕ ವರ್ಗ ದಡಿ ಹಲವು ಯೋಜನೆಗಳು ಇದೆ, ಈ ರೀತಿಯ ಹಲವು ಯೋಜನೆಗಳನ್ನು ಉಪಯೋಗಿಸುವ ರೀತಿ ಕೆಲಸ ಆಗಬೇಕು.ನನ್ನ ಸಹಕಾರ ಯಾವತ್ತೂ ನಿಮ್ಮ ಜೊತೆ ಇದೆ ಎಂದರು.
ಕಾರ್ಯಕ್ರಮದ ಸಭಾದ್ಯಕ್ಷತೆಯನ್ನು ಶ್ರೀ ಸವೀನ್ ರೈ ಪಂಜಳ ಜಿಲ್ಲಾದ್ಯಕ್ಷರು ಎಸ್.ಕೆ.ಪಿ.ಎ. ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಕಿಶೋರ್ ಸುವರ್ಣ ಎಲ್.ಕೆ. ಗ್ರೂಪ್ ಕಾವೂರು ,ಸಂತೋಷ್.ವಿ. ಪೂಂಜ ಬಾಲದಗುತ್ತು,ಶ್ರೀ ವಾಸುದೇವ ರಾವ್, ಶ್ರೀ ಆನಂದ ಎನ್. ಬಂಟ್ವಾಳ್, ಶ್ರೀ. ಅಜಯ್ ಮಂಗಳೂರು, ಗೋಪಾಲ್ ಸುಳ್ಯ, ದೇವರಾಜ್ ಶೆಟ್ಟಿ ಅಶೋಕ್ ಕುಮಾರ್ ಚೌಟ ಹಾಗು ಹಲವು ಗಣ್ಯರು ಭಾಗವಹಿಸಿದ್ದರು.