ಬೆಳ್ತಂಗಡಿ ಸೆಪ್ಟೆಂಬರ್ 22: ಧರ್ಮಸ್ಥಳ ಪ್ರಕರಣದ ದೂರುದಾರ ಇದೀಗ ಆರೋಪಿಯಾಗಿ ಜೈಲಿನಲ್ಲಿರುವ ಚಿನ್ನಯ್ಯ ಎರಡು ವರ್ಷಗಳ ಹಿಂದೆ ತಿಮರೋಡಿ ಮನೆಯಲ್ಲಿ ಮಾತನಾಡಿರುವ ವಿಡಿಯೋಗಳ ಸಿರೀಸ್ ದಿನಾ ಬಿಡುಗಡೆಯಾಗುತ್ತಲೇ ಇದೆ. ಈಗಾಗಲೇ 11 ಪಾರ್ಟ್ ಗಳು ಬಿಡುಗಡೆಯಾಗಿದ್ದು, ಚಿನ್ನಯ್ಯ ಸೌಜನ್ಯ ಪ್ರಕರಣದ ಕುರಿತಂತೆ ಇಂಚಿಂಚೂ ಮಾಹಿತಿಯನ್ನು ಬಿಚ್ಚಿಟ್ಟಿದ್ದಾನೆ. ಇದರೊಂದಿಗೆ ಸೌಜನ್ಯ ಹೋರಾಟಕ್ಕೆ ಮತ್ತಷ್ಟು ಬಲ ಸಿಗಲಿದೆ ಎಂದು ಹೇಳಲಾಗಿದೆ.


ಧರ್ಮಸ್ಥಳ ಪ್ರಕರಣದ ದೂರುದಾರ ಇದೀಗ ಜೈಲಿನಲ್ಲಿರುವ ಚಿನ್ನಯ್ಯ 2 ವರ್ಷಗಳ ಹಿಂದೆ ಮಹೇಶ್ ಶೆಟ್ಟಿ ತಿಮರೋಡಿ ಅವರ ಮನೆಯಲ್ಲಿ ನಡೆಸಿದ ಮಾತುಕತೆಯ ವಿಡಿಯೋ ಗಳು ಇದೀಗ ರಿಲೀಸ್ ಆಗುತ್ತಿದೆ. ಈಗಾಗಲೇ 11 ಪಾರ್ಟ್ ವಿಡಿಯೋ ರಿಲೀಸ್ ಆಗಿದ್ದು, ಅದರಲ್ಲಿ ಸೌಜನ್ಯ ಪ್ರಕರಣಕ್ಕೆ ಕುರಿತಂತೆ ಮಾಹಿತಿಗಳನ್ನು ಚಿನ್ನಯ್ಯ ನೀಡಿದ್ದಾನೆ. 2023 ರ ಆಗಸ್ಟ್ ನಲ್ಲಿ ಮಾಡಿದ ವಿಡಿಯೋ ಇದಾಗಿದ್ದು, ತಿಮರೋಡಿ ಮನೆಗೆ ಮೊದಲ ಭಾರೀ ಭೇಟಿ ನೀಡಿದ್ದ ಚಿನ್ನಯ್ಯ, ಈ ವೇಳೆ ಚಿನ್ನಯ್ಯನ ಎರಡನೇ ಹೆಂಡತಿ ಕೂಡ ಇದ್ದರು.

ರೀಲಿಸ್ ಆಗಿರುವ 9ನೇ ಪಾರ್ಟ್ ವಿಡಿಯೋದಲ್ಲಿ ವೇಲಿನಿಂದ ರವಿ ಪೂಜಾರಿಯನ್ನು ನೇತು ಹಾಕಿ ಕೊಂದಿದ್ದಾರೆ. ಪೊಲೀಸರು ಬರುವ ಮೊದಲೇ ರವಿ ಪೂಜಾರಿಯನ್ನು ಇಳಿಸಿದ್ದಾರೆ ಎಂದು ಚಿನ್ನಯ್ಯ ವಿಡಿಯೋದಲ್ಲಿ ಹೇಳಿದ್ದಾನೆ. ನೇತ್ರಾವತಿಯ ನ್ಯಾಚುರೋಪತಿ ಬಳಿ ಒಂದು ಬಸ್ ಸ್ಟಾಪ್ ಇತ್ತು, ಆ ಬಸ್ ಸ್ಟಾಪ್ ನಲ್ಲಿ ಒಂದು ಡೂಮ್ ಸಿಸಿಟಿವಿ ಇತ್ತು. ಅದರಲ್ಲಿ ಸೌಜನ್ಯ ಕೇಸ್ ನ ಸಾಕ್ಷ್ಯ ಇತ್ತು. ಆ ಬಸ್ ಸ್ಟಾಪ್ ಸಮೇತ ಎತ್ತಿಕೊಂಡು ಹೋಗಿದ್ದಾರೆ.


ಸೌಜನ್ಯ ಕೊಲೆ ಆಗಿದ್ದು ನೇತ್ರಾವತಿ ಬಳಿ, ಆದ್ರೆ ಲೀಕ್ ಔಟ್ ಆಗಿದ್ದು ಮಾತ್ರ ಉಜಿರೆಯಲ್ಲಿ ಇದು ಹೇಗೆ ಅಂತಾ ಅರ್ಥ ಆಗಲಿಲ್ಲ ಎಂದಿರುವ ಚಿನ್ನಯ್ಯ, ನಾವು ನೇತ್ರಾವತಿಯಲ್ಲಿ ಸಿಕ್ಕ ಚಿನ್ನ ವಸ್ತುಗಳನ್ನು ಮಾರುತ್ತಿದ್ದೆವು, ಆಗ ಉಜಿರೆಯ ದಿವಾಕರ್ ಎಂಬುವವರು ಖರೀದಿ ಮಾಡುತ್ತಿದ್ದರು. ಮಾರಲು ಅಲ್ಲಿಗೆ ಹೋದಾಗ ಸೌಜನ್ಯ ಕೊಲೆ ಮಾಡಿದ್ದು ಯಾರು ಅಂತಾ ಅವರು ಹೇಳಿದ್ರು ಎಂದ ಚಿನ್ನಯ್ಯ ತಿಳಿಸಿದ್ದಾನೆ.
ಇದೀಗ ಬಿಡುಗಡೆಯಾಗುತ್ತಿರುವ ಎಲ್ಲಾ ವಿಡಿಯೋಗಳಲ್ಲೂ ಚಿನ್ನಯ್ಯ ಮಾಹಿತಿ ನೀಡಿದ್ದಾನೆ. ಆದರೆ ಎಸ್ ಐಟಿ ತನಿಖೆ ವೇಳೆ ಮಾತ್ರ ಈ ವಿಡಿಯೋದಲ್ಲಿರುವ ಸ್ಥಳ ಬಿಟ್ಟು ಬೇರೆ ಕಡೆ ಹುಡುಕಿಸಿದ್ದಾನೆ ಎಂಬ ಆರೋಪ ಇದೀಗ ಕೇಳಿ ಬಂದಿದೆ.

ಎರಡು ವರ್ಷಗಳ ಹಿಂದೆ ಚಿನ್ನಯ್ಯ ತನ್ನ ಪತ್ನಿಯೊಂದಿಗೆ ಬಂದು ಸೌಜನ್ಯಾ ಹೋರಾಟಗಾರರ ಮುಂದೆ ನೂರಾರು ಶವಗಳನ್ನು ಹೂತಿದ್ದೇನೆಂದು ಹೇಳಿಕೆ ನೀಡಿರುವುದು ಬಹಿರಂಗವಾಗಿದೆ. ಇದೇ ರೀತಿಯ ಹೇಳಿಕೆಯನ್ನು ಬೆಳ್ತಂಗಡಿ ಕೋರ್ಟಿನಲ್ಲಿ 164 ಅಡಿ ನೀಡಿದ್ದಾನೆ. ಅಲ್ಲದೆ, ಈತನ ಹೇಳಿಕೆಯನ್ನು ಸುಪ್ರೀಂ ಕೋರ್ಟ್ ವಕೀಲರಿಗೂ ಸಲ್ಲಿಸಿದ್ದಾನೆ. ಆದರೆ ಒಟ್ಟು ಪ್ರಕರಣದಲ್ಲಿ ಈತನ ಹೇಳಿಕೆಗಳು ಮತ್ತು ಆನಂತರದ ವರ್ತನೆಗಳು ಒಂದಕ್ಕೊಂದು ತಾಳೆಯಾಗದ ರೀತಿ ಇದೆ. ಈಗ ನೋಡಿದರೆ ಶವ ಹೂತಿದ್ದು ನಿಜವೋ, ಸುಳ್ಳೋ ಅಥವಾ ಈತ ನೀಡಿರುವ ಹೇಳಿಕೆಯೇ ಸುಳ್ಳೋ ಎನ್ನುವ ಗುಮಾನಿ ಬರುವಂತಾಗಿದೆ. ಬಂಧನ ಆಗೋದಕ್ಕೂ ಮುನ್ನ ಹಲವಾರು ಕಡೆ ಏಕ ಪ್ರಕಾರದಲ್ಲಿ ಶವಗಳನ್ನು ಹೂತಿರುವ ಬಗ್ಗೆ ಹೇಳಿಕೆ ನೀಡಿದ್ದರೂ, ನೇತ್ರಾವತಿ ಆಸುಪಾಸಿನಲ್ಲಿ ಹಲವಾರು ಶವಗಳನ್ನು ಹೂತಿದ್ದು ಸತ್ಯವೆಂದು ಫಾರೆನ್ಸಿಕ್ ವೈದ್ಯರು ಹೇಳಿದ್ದರೂ ಆತ ತೋರಿಸಿದ ಜಾಗದಲ್ಲಿ ಮಾತ್ರ ಏನೊಂದು ಸಾಕ್ಷ್ಯವೂ ಸಿಗದೇ ಇರುವುದು ಒಟ್ಟು ಬೆಳವಣಿಗೆ ಸಹಜ ಎಂದು ತೋರುತ್ತಿಲ್ಲ. ಇಂತಹದ್ದೇ ಪ್ರಶ್ನೆಗಳು ಎಸ್ಐಟಿ ಅಧಿಕಾರಿಗಳಿಗೂ ಬಂದಿದ್ದು, ಚಿನ್ನಯ್ಯ ತಪ್ಪಾದ ಜಾಗ ತೋರಿಸಿ ಯಾಮಾರಿಸಿದ್ನಾ ಎಂಬ ಸಂಶಯ ಬರುವಂತಾಗಿದೆ.

Share Information