Connect with us

    LATEST NEWS

    ಮಾರ್ಚ್ 5 ಕ್ಕೆ ಮಂಗಳೂರಿನಲ್ಲಿ ಸೋನು ನಿಗಮ್ ಲೈವ್ ಇನ್ ಕನ್ಸರ್ಟ್‌

    ಮಂಗಳೂರು : ಮಂಗಳೂರಿಗೆ ಖ್ಯಾತ ಗಾಯಕ ಸೋನು ನಿಗಮ ಅವರು ಮಾರ್ಚ್ 5 ರಂದು ಆಗಮಿಸಲಿದ್ದು. ರೋಹನ್‌ ಕಾರ್ಪೊರೇಷನ್‌ನಿಂದ ವತಿಯಿಂದ ಸೋನು ನಿಗಮ್ ಲೈವ್ ಇನ್ ಕನ್ಸರ್ಟ್‌ ಕಾರ್ಯಕ್ರಮ ಆಯೋಜಿಸಲಾಗಿದೆ.

    ಈ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ಮುಖ್ಯಸ್ಥ ರೋಹನ್ ಮೊಂತೆರೊ ಪಕ್ಷಿಕೆರೆಯ 32 ಎಕರೆ ಪ್ರದೇಶದಲ್ಲಿ 372 ನಿವೇಶನಗಳಿರುವ ‘ರೋಹನ್ ಎಸ್ಟೇಟ್’ ವಸತಿ ಬಡಾವಣೆಯಲ್ಲಿ ಎಲ್ಲ ಸೌಲಭ್ಯಗಳಿವೆ. ಈ ಬಡಾವಣೆ ಹಾಗೂ ಅಲ್ಲಿನ ಸೌಕರ್ಯಗಳನ್ನು ಮಂಗಳೂರು ಮತ್ತು ಆಸುಪಾಸಿನ ಜನರಿಗೆ ಪರಿಚಯಿಸುವ ಉದ್ದೇಶದಿಂದ ಮಾ.5ರಂದು ಸಂಜೆ 5 ಗಂಟೆಗೆ ಎಂ.ಆರ್. ಪೂಂಜ ಐಟಿಐನ ಎದುರುಗಡೆ, ಕಂಬಳಬೆಟ್ಟು, ಪಕ್ಷಿಕೆರೆ (ಹಳೆಯಂಗಡಿ) ರೋಹನ್ ಎಸ್ಟೇಟ್ ಬಡಾವಣೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದರು.‌ ಗಾಯಕ ಸೋನು ನಿಗಮ್ ಕಾರ್ಯಕ್ರಮಕ್ಕೆ 5,000ಕ್ಕೂ ಹೆಚ್ಚು ಜನರನ್ನು ನಿರೀಕ್ಷಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರು ಉಚಿತ ಪಾಸ್‌ಗಾಗಿ ಮಾ.3ರ ಒಳಗೆ ಪಕ್ಷಿಕೆರೆ ರೋಹನ್ ಎಸ್ಟೇಟ್‌ಗೆ ಭೇಟಿ ನೀಡಿ ಪಡೆಯಬಹುದು. 9845607725 /9845607724/ 9845607731 ಈ ಸಂಖ್ಯೆ ಸಂಪರ್ಕಿಸಿ, ಉಚಿತ ಪಾಸ್‌ ಡೌನ್‌ಲೋಡ್ ಮಾಡುವ ಲಿಂಕ್ ಪಡೆಯಬಹುದು. ಹೆಚ್ಚಿನ ವಿವರಕ್ಕೆ rohancorporation.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು ಹೇಳಿದರು.

    Share Information
    Advertisement
    Click to comment

    You must be logged in to post a comment Login

    Leave a Reply