Connect with us

    LATEST NEWS

    ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಆಟೋ ಡ್ರೈವರ್ “ಇಂಕೇಮ್‌ ಇಂಕೇಮ್‌ ಕಾವಾಲೆ” ಕನ್ನಡ ವರ್ಶನ್

     

    ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಆಟೋ ಡ್ರೈವರ್ ಇಂಕೇಮ್‌ ಇಂಕೇಮ್‌ ಕಾವಾಲೆ ಕನ್ನಡ ವರ್ಶನ್

    ಮಂಗಳೂರು ಸೆಪ್ಟೆಂಬರ್ 4: ಕನ್ನಡತಿ ರಶ್ಮಿಕಾ ಮಂದಣ್ಣ ಅಭಿನಯಿಸಿರುವ ಗೀತಾ ಗೋವಿಂದಂ ಸಿನೆಮಾ ಈಗ ದೇಶದಾದ್ಯಂತ ಮನೆ ಮಾತಾಗಿದ್ದು ಅದರಲ್ಲೂ ಚಿತ್ರದ “ಇಂಕೇಮ್‌ ಇಂಕೇಮ್‌ ಕಾವಾಲೆ” ಹಾಡು ಈಗ ಎಲ್ಲರ ಫೇವರೇಟ್‌ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಈ ಹಾಡು ದೂಳೆಬಿಸುತ್ತಿದೆ. ರಶ್ಮಿಕಾ ಮಂದಣ್ಣ ಹಾಗೂ ತೆಲುಗು ನಟ ವಿಜಯ್ ದೇವರಕೊಂಡ ಅವರ ತೆರೆ ಮೇಲಿನ ಕೆಮೆಸ್ಟ್ರಿ ಸೂಪರ್ ಹಿಟ್ ಆಗಿದೆ.

    ಈಗ ಗೀತಾ ಗೋವಿಂದಂ ಸಿನೆಮಾದ ಹಿಟ್ ಸಾಂಗ್ “ಇಂಕೇಮ್‌ ಇಂಕೇಮ್‌ ಕಾವಾಲೆ” ಕನ್ನಡ ವರ್ಷನ್‌ ಹಾಡು ಬಂದಿದ್ದು, ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸುತ್ತಿದೆ. ಈ ಹಾಡನ್ನು ಕನ್ನಡಕ್ಕೆ ಡಬ್ ಮಾಡಿದ್ದು ಮಂಗಳೂರಿನ ಒಬ್ಬ ಸಾಮಾನ್ಯ ಆಟೋ ಡ್ರೈವರ್‌

    ಸಂದೇಶ್ ನೀರುಮಾರ್ಗ ಎಂಬ ಮಂಗಳೂರಿನ ವಾಮಂಜೂರು ನಿವಾಸಿ ಈ ಹಾಡನ್ನು ಹಾಡಿದ್ದು, ಈಗ ಇದು ಸೋಶಿಯಲ್ ಮಿಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ.ಯೂಟೂಬ್ ನಲ್ಲಿ ಈ ಹಾಡನ್ನು ಲಕ್ಷಾಂತರ ಜನ ವಿಕ್ಷಣೆ ಮಾಡಿದ್ದಾರೆ.

    ಚಿಕ್ಕಂದಿನಿಂದಲೇ ಭಜನೆಯಲ್ಲಿ ತೊಡಗಿಕೊಂಡು ತಂಡ ಕಟ್ಟಿರುವ ಸಂದೇಶ್, ಸಂಗೀತ ಕಲಿತವರಲ್ಲ. ಆಟೋ ಓಡಿಸಿಕೊಂಡು ಪದ್ಯ ಹೇಳುತ್ತಾ ಜೀವನ ಸಾಗಿಸುತ್ತಿರುವ ಸಂದೇಶ್‌ಗೆ ಅಪಘಾತವಾಗಿ ಮನೆಯಲ್ಲೇ ಇದ್ದರು. ಈ ವೇಳೆ ತೆಲುಗಿನ ಹಾಡನ್ನು ಕೇಳುತ್ತಲೇ ಕನ್ನಡದಲ್ಲೇ ಲಿರಿಕ್ಸ್ ಬರೆದಿದ್ದಾರೆ.

    ಸ್ನೇಹಿತರ ಸಹಾಯದಿಂದ ಗೆಳೆಯನ ಸ್ಟುಡಿಯೊದಲ್ಲಿ ಹಾಡಿ ಯೂಟ್ಯೂಬ್‌ನಲ್ಲಿ ಅಪ್ ಲೋಡ್ ಮಾಡಿದ್ದಾರೆ. ಅಪಲೋಡ್ ಆದ ಕ್ಷಣದಲ್ಲೇ ಲಕ್ಷಾಂತರ ಮಂದಿ ಹಾಡನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಇನ್ನು ಈ ಹಾಡಿಗೆ ನಟಿ ರಶ್ಮಿಕಾ ಮಂದಣ್ಣ ಮೆಚ್ಚುಗೆ ಸೂಚಿಸಿದ್ದು, ತಮ್ಮ Instagramನಲ್ಲಿ ಸ್ಟೇಟಸ್ ಆಗಿ ಹಾಕಿಕೊಂಡಿದ್ದರು.

    ಸಂದೇಶ್ ತಂದೆಯೂ ಮಂಗಳೂರಿನಲ್ಲಿ ಆಟೋ ಒಡಿಸಿಕೊಂಡಿದ್ದು, ಮಗನ ಪ್ರತಿಭೆಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಶಾರ್ಟ್ ಫಿಲ್ಮ್‌ಗಳಿಗೆ ಧ್ವನಿ ನೀಡಿರುವ ಸಂದೇಶ್​ಗೆ ಸನ್ಮಾನಗಳ ಮಹಾಪೂರವೇ ಹರಿದಬಂದಿವೆ. ಕನ್ನಡ ಸಿನಿಮಾಗಳಲ್ಲಿಯೂ ಸಂದೇಶ್‌ಗೆ ಹಾಡಲು ಚಾನ್ಸ್‌ ಸಿಗಲಿ ಎನ್ನುತ್ತಾರೆ ಸಂದೇಶ್ ತಾಯಿ.

    VIDEO

    Share Information
    Advertisement
    Click to comment

    You must be logged in to post a comment Login

    Leave a Reply