Connect with us

LATEST NEWS

ತಾಯಿಯ ಕೆನ್ನೆಗೆ ಬಾರಿಸಿದ ಮಗ..ಸ್ಥಳದಲ್ಲೇ ಪ್ರಾಣ ಬಿಟ್ಟ ತಾಯಿ..ಸಿಸಿಟಿವಿ ವಿಡಿಯೋ ವೈರಲ್

ನವದೆಹಲಿ: ಪಾರ್ಕಿಂಗ್ ವಿಷಯ ಕುರಿತಂತೆ ಅತ್ತೆ ಮತ್ತು ಸೊಸೆ ನಡುವೆ ಮಾತಿನ ಚಕಮಕಿ ಸಂದರ್ಭ ರಸ್ತೆ ಬದಿಯಲ್ಲಿ ಮಗ ಹೊಡೆದ ಒಂದೇ ಒಂದು ಏಟಿಗೆ ವೃದ್ಧ ತಾಯಿ ಸ್ಥಳದಲ್ಲಿಯೇ ಪ್ರಾಣ ಬಿಟ್ಟ ಘಟನೆ ದೆಹಲಿಯ ದ್ವಾರಕಾದಲ್ಲಿ ನಡೆದಿದೆ.

ಮೃತ ವೃದ್ಧೆಯನ್ನು ಅವ್ತಾರ್ ಕೌರ್(76) ಎಂದು ಗುರುತಿಸಲಾಗಿದೆ. ಮಗನ ಹೊಡೆತದಿಂದ ವೃದ್ಧೆ ಸಾವನ್ನಪ್ಪಿದ ದೃಶ್ಯ ಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಸೊಸೆ ಮತ್ತು ಅತ್ತೆ ನಡುವೆ ಮಾತಿನ ಚಕಮಕಿ ನಡೆಯುತ್ತಿರುತ್ತದೆ. ಈ ವೇಳೆ ಅಲ್ಲೇ ಇದ್ದ ಮಗ ತನ್ನ ತಾಯಿಗೆ ಕೆನ್ನೆಗೆ ಬಾರಿಸುತ್ತಾನೆ. ಈ ವೇಳೆ ತಾಯಿ ಅಲ್ಲೇ ಪ್ರಜ್ಞೆ ತಪ್ಪಿ ನೆಲಕ್ಕೆ ಬೀಳುತ್ತಾರೆ. ಅತ್ತೆ ನೆಲಕ್ಕೆ ಬಿದ್ದಿದ್ದನ್ನು ಕಂಡು ಗಾಬರಿಗೊಂಡ ಸೋಸೆ ಕೂಡಲೇ ಅವರ ಬಳಿ ಹೋಗಿ ಅತ್ತೆಯನ್ನು ಮೇಲಕ್ಕೆತ್ತು ಪ್ರಯತ್ನ ಮಾಡುತ್ತಿರುವುದನ್ನು ನಾವು ವೀಡಿಯೋದಲ್ಲಿ ಕಾಣಬಹುದಾಗಿದೆ.

 

ನಂತರ ವೃದ್ಧೆಯನ್ನು ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅಲ್ಲಿ ವೃದ್ಧೆ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಘಟನೆ ಸಂಬಂಧ ಕೌರ್ ಅವರ ಮಗ ರಣಬೀರ್(45)  ವಿರುದ್ದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ ಆತನನ್ನು ಬಂಧಿಸಿದ್ದಾರೆ.