DAKSHINA KANNADA
ಸೋಮೇಶ್ವರ : ಸಮುದ್ರ ಪಾಲಾಗುತ್ತಿದ್ದವನ ರಕ್ಷಣೆ
ಉಳ್ಳಾಲ, ಮಾರ್ಚ್ 21: ಸಮುದ್ರ ಪಾಲಾಗುತ್ತಿದ್ದ ಉತ್ತರಪ್ರದೇಶ ಮೂಲದ ವ್ಯಕ್ತಿಯನ್ನು ಕರಾವಳಿ ಕಾವಲು ಪಡೆ ಸಿಬ್ಬಂದಿ ಮತ್ತು ಸ್ಥಳೀಯ ಈಜುಗಾರ ರಕ್ಷಿಸಿರುವ ಘಟನೆ ಸೋಮೇಶ್ವರ ಸಮುದ್ರ ತೀರದಲ್ಲಿ ಇಂದು ಸಂಜೆ ವೇಳೆ ನಡೆದಿದೆ.
ಉತ್ತರ ಪ್ರದೇಶ ಮೂಲದ 11 ಮಂದಿ ಸೋಮೇಶ್ವರ ಸಮುದ್ರ ವಿಹಾರಕ್ಕೆ ಬಂದಿದ್ದರು. ಈ ಪೈಕಿ ನಾಲ್ವರು ಸಮುದ್ರ ಸ್ನಾನಕ್ಕೆ ಇಳಿದಿದ್ದಾರೆ. ಇವರಲ್ಲಿ ಯುವಕನೋರ್ವ ಸಮುದ್ರದ ಅಲೆಗಳ ನಡುವೆ ಸಿಲುಕಿ ಸುಮಾರು 40 ಮೀ ನಷ್ಟು ದೂರ ಎಳೆದೊಯ್ದಿದ್ದರು.
ಘಟನೆಯನ್ನು ಕಂಡ ಕರಾವಳಿ ಕಾವಲು ಪಡೆ ಸಿಬ್ಬಂದಿ ಅಶೋಕ್ ಸೋಮೇಶ್ವರ ಮತ್ತು ಸ್ಥಳೀಯ ಈಜುಗಾರ ಕಿರಣ್ ಒಂಭತ್ತುಕೆರೆ ಎಂಬವರು ಸೇರಿ ಸಮುದ್ರಕ್ಕೆ ಧುಮುಕಿ ಬಹಳಷ್ಟು ಸೆಣೆಸಾಡಿ ಯುವಕನನ್ನು ದಡ ಸೇರಿಸಿ ಪ್ರಾಣವನ್ನು ರಕ್ಷಿಸಿದ್ದಾರೆ.
You must be logged in to post a comment Login