ಕೊರೊನಾ ವೈರಸ್ ನ್ನು ಉದ್ದೇಶಪೂರ್ವಕವಾಗಿ ಪಸರಿಸಲಾಗುತ್ತಿದೆ – ಸುಗಣೇಂದ್ರ ತೀರ್ಥ ಸ್ವಾಮಿಜಿ

ಉಡುಪಿ ಎಪ್ರಿಲ್ 06: ಕೊರೊನಾದಿಂದ ಇಡೀ ಜಗತ್ತನ್ನೆ ನಾಶಮಾಡಬಹುದು ಎಂಬ ಮಾಹಿತಿ ದುಷ್ಟರಿಗೆ ತಿಳಿದಿದ್ದು, ಈ ಹಿನ್ನಲೆ ಕೊರೊನಾ ವೈರಸ್ ನ್ನು ಉದ್ದೇಶ ಪೂರ್ವಕವಾಗಿ ಪಸರಿಸಲಾಗುತ್ತಿದೆ ಎಂಬ ಬಗ್ಗೆ ಅನುಮಾನ ಇದೆ ಎಂದು ಪುತ್ತಿಗೆ ಮಠಾಧೀಶ ಸುಗುಣೇಂದ್ರತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಉದ್ದೇಶಪೂರ್ವಕವಾಗಿ ಕೊರೋನಾ ಹರಡುವ ಪ್ರಯತ್ನ ಆಗುತ್ತಿದ್ದು, ಒಬ್ಬ ದುಷ್ಟ ನಿಂದ ಸಮಾಜಕ್ಕೆ ದೇಶಕ್ಕೆ ತೊಂದರೆಯಾಗುತ್ತಿದೆ. ಈ ಕುರಿತಂತೆ ಜಾಗತಿಕ ವೇದಿಕೆಯಲ್ಲಿ ಕೋರೋಣ ಬಗ್ಗೆ ಚರ್ಚೆಯಾಗಲಿ, ಈಗಾಗಲೇ ವಿಶ್ವದ ಧಾರ್ಮಿಕ ನಾಯಕರ ಜೊತೆ ಚರ್ಚೆ ನಡೆಸಿದ್ದೇನೆ , ಕರೋನಾದ ವಿರುದ್ಧ ದೂರಗಾಮಿ ಆಲೋಚನೆಯ ಅಗತ್ಯತೆ ಇದೆ ಎಂದರು.

ಮನುಷ್ಯನ ದೇಹಕ್ಕೆ ಸಸ್ಯಾಹಾರವೇ ಸೂಕ್ತ , ಮನುಷ್ಯ ಬದುಕಲು ಮಾಂಸಾಹಾರದ ಅಗತ್ಯ ಇಲ್ಲ , ಜೀವಂತ ಪ್ರಾಣಿಗಳನ್ನು ಹಿಡಿದು ತಿನ್ನುವುದರಿಂದ ಕೋರೋನ ಬಂದಿದೆ. ಮಾನವ ಸಮುದಾಯ ವಿಧ್ವಂಸಕ ಚಿಂತನೆಯಲ್ಲಿ ಸಾಗುತ್ತಿದೆ. ಭಗವಂತ ಭೂಮಿಯನ್ನು ಸೃಷ್ಟಿ ಮಾಡಿದ್ದು ಬದುಕುವುದಕ್ಕಾಗಿ ಆದರೆ ಮನುಷ್ಯರು ಶಸ್ತ್ರಾಸ್ತ್ರ ಒಗ್ಗೂಡಿಸುವಲ್ಲಿ ನಿರತರಾಗಿದ್ದಾರೆ ಎಂದು ಅಬಿಪ್ರಾಯಪಟ್ಟರು.

ಕೊರೋನಾದಿಂದ ಪುತ್ತಿಗೆ ಮಠದ ವಿದೇಶಿ ಬ್ರಾಂಚ್ ಗಳಿಗೆ ತೊಂದರೆಯಾಗಿದ್ದು, ಅಮೆರಿಕ ಮತ್ತು ಲಂಡನ್ ನ 11 ಶಾಖೆಗಳನ್ನು ಮುಚ್ಚಿದ್ದೇವೆ ಮಠದ ಸಿಬ್ಬಂದಿಗಳು ಅರ್ಚಕರು ಗೊಂದಲದಲ್ಲಿದ್ದು, ವಿದೇಶದ ಸರಕಾರಗಳು ನಮಗೆ ಸಾಕಷ್ಟು ಸಹಾಯ ಮಾಡಿದೆ ಎಂದರು.