ದುಬೈ, ನವೆಂಬರ್22: ಕೊಡಗು ಮತ್ತು ದಕ್ಷಿಣ ಕನ್ನಡ ಗೌಡ ಸಮಾಜ ಆಯೋಜಿಸಿದ ಸ್ನೇಹ ಸಮ್ಮಿಲನ 2025 ಕಾರ್ಯಕ್ರಮವು ನ.16 ರಂದು ದುಬೈಯ ಆಶಿಯಾನ ಫಾರ್ಮ್ ಹೌಸ್ ಸಭಾಂಗಣದಲ್ಲಿ ಬಹಳ ಅದ್ಧೂರಿಯಾಗಿ ನಡೆಯಿತು.

ಪೂರ್ವಾಹ್ನ 9 ರಿಂದ ಆರಂಭವಾದ ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ, ದೇಶ ಹಾಗೂ ವಿದೇಶದಲ್ಲಿ ಸಾಧನೆ ಮಾಡಿದ ಮಕ್ಕಳನ್ನು ಹಾಗೂ ಉದ್ಯಮಿಗಳನ್ನು ಸನ್ಮಾನ ಮಾಡಿ ಗೌರವಿಸಲಾಯಿತು. ಮಧ್ಯಾಹ್ನದ ಭೋಜನದ ನಂತರ ಮಕ್ಕಳಿಗೆ ಆಟೋಟ ಸ್ಪರ್ಧೆಯನ್ನು ಮತ್ತು ವಾಲಿಬಾಲ್ ಹಾಗೂ ತ್ರೋಬಾಲ್ ಪಂದ್ಯಾಟವನ್ನು ಏರ್ಪಡಿಸಲಾಗಿತ್ತು.

ಸಮ್ಮೇಳನದ ಮುಖ್ಯ ಆಯೋಜಕರಾಗಿ ಹರೀಶ್ ಕೋಡಿ, ಸುರೇಶ್ ಕುಂಪಲ, ತೇಜ್ ಕುಮಾರ್ ಕೊರಂಬಡ್ಕ, ಮೋಹನ್ ಕಡಂಬಳ, ದಿಲೀಪ್ ಉಳುವಾರ, ಶರತ್ ಚೊಕ್ಕಾಡಿ, ರೋಶನ್ ಕಂಪ, ಸುನಿಲ್ ಮೊಟ್ಟೆಮನೆ, ಸುಪ್ರೀತ್ ಕುಂಡಡ್ಕ, ಜೀವನ್ ಗೌಡ ಕುಂಜತ್ತಾಡಿ, ಯತೀಶ್ ಗೌಡ ಕಾಡಮನೆ, ರತೀಶ್ ಬಗ್ಗನಮನೆ, ಆಶಿಶ್ ಹರೀಶ್ ಕೋಡಿ, ಮೀನಾ ಹರೀಶ್ ಕೋಡಿ, ಪುಲೋಮ ಮಹೇಂದ್ರ ಕೊಳಂಬೆ, ಹಾಗೂ ಇತರ ಸದಸ್ಯರು ಶ್ರಮಿಸಿದ್ದರು. ಅರಬ್ ಸಂಯುಕ್ತ ಸಂಸ್ಥಾನದಲ್ಲಿ ನೆಲೆಸಿರುವ ಸುಮಾರು 300 ಕ್ಕೂ ಮಿಕ್ಕಿದ ಗೌಡ ಕುಲ ಬಾಂಧವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಮಾರಂಭದ ಅಧ್ಯಕ್ಷತೆಯನ್ನು ಶ್ರೀಯುತ ಹೊದ್ದೆಟ್ಟಿ ರಾಮಚಂದ್ರರವರು ವಹಿಸಿಕೊಂಡಿದ್ದು, ಮುಖ್ಯ ಅತಿಥಿಯಾಗಿ ಶ್ರೀಯುತ ಮುಕ್ಕಾಟಿ ಕಿಶೋರ್ ರವರು ಉಪಸ್ಥಿತರಿದ್ದರು. ಕಾರ್ಯಕ್ರಮದ ಸಂಪೂರ್ಣ ನಿರ್ವಹಣೆಯನ್ನು ನಿತಿನ್ ದೋರ್ತೋಡಿ ಸಾರತ್ಯದೊಂದಿಗೆ ಯುವ ನಿರೂಪಕಿ ಶ್ರಾವ್ಯ ಗೌಡ ಹಾಗೂ ರಕ್ಷಿತಾ ಸುಪ್ರೀತ್ ಬಹಳ ಅಚ್ಚುಕಟ್ಟಾಗಿ ನೆರವೇರಿಸಿಕೊಟ್ಟರು.

Share Information