LATEST NEWS
ಬಾರ್ಕೂರಿನಲ್ಲಿ ಶ್ರೀ ಕುಮಾರಸ್ವಾಮಿ ಮೂರ್ತಿಯ ಮೇಲೆ ಹರಿದಾಡಿದ ಸರ್ಪ
ಉಡುಪಿ: ಪುರಾಣ ಪ್ರಸಿದ್ಧ ಬಾರಕೂರಿನ ಪ್ರಧಾನ ದೇಗುಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿಯ ವಿಶೇಷ ಪೂಜೆ ಸುತ್ತು ಬಲಿ ಸಂದರ್ಭದಲ್ಲಿ ದೇವಾಲಯದ ಒಳಭಾಗದ ಪೌಳಿ ಯಲ್ಲಿರುವ ಶ್ರೀ ಕುಮಾರ ಸ್ವಾಮಿ ಮೂರ್ತಿಯ ಮೇಲೆ ಸರ್ಪ ಗೋಚರಿಸಿ ಭಕ್ತರನ್ನು ತನ್ಮಯ ಗೊಳಿಸಿತು.
ಈ ದೃಶ್ಯ ಇತಿಹಾಸ ಪ್ರಸಿದ್ಧ ಬಾರ್ಕೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆದಿದೆ. ಮಕರ ಸಂಕ್ರಮಣದ ವಿಶೇಷ ಪೂಜೆ ಸಂದರ್ಭದಲ್ಲಿ ಈ ಅಪರೂಪದ ದೃಶ್ಯ ಕಂಡು ಬಂದಿದೆ. ಅಂದರೆ ಪಂಚಲಿಂಗೇಶ್ವರ ದೇವಸ್ಥಾನದ ಸುಬ್ರಹ್ಮಣ್ಯನ ವಿಗ್ರಹದ ಮೇಲೆ ಸರ್ಪವೊಂದು ಹರಿದಾಡಿದೆ.
ನಾಗಾರಾಧನೆಗೆ ವಿಶೇಷ ಮಹತ್ವ ಇರುವ ಕರಾವಳಿಯಲ್ಲಿ ಅದರಲ್ಲೂ ಐತಿಹಾಸಿಕ ಬಾರ್ಕೂರಿನ ದೇವಸ್ಥಾನದಲ್ಲಿ ಈ ಥರದ ದೃಶ್ಯ ಕಂಡುಬಂದಿರುವುದು ಜನರಲ್ಲಿನ ಕುತೂಹಲ ಕೆರಳಿಸಿದೆ. ಮಾತ್ರವಲ್ಲ ಸುಬ್ರಹ್ಮಣ್ಯನ ವಿಗ್ರಹದ ಮೇಲೆ ಸರ್ಪ ಹರಿದಾಡಿದ ವಿಡಿಯೋ ತುಣುಕು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.