Connect with us

DAKSHINA KANNADA

ಹಾವನ್ನು ರಕ್ಷಿಸಲು ಹೊರಟ ಉರಗ ತಜ್ಞ ಮುಸ್ತಫಾ ಹಾವಿಗೆ ಬಲಿ…!!

ಪುತ್ತೂರು ಎಪ್ರಿಲ್ 18: ಹಾವೊಂದನ್ನು ರಕ್ಷಿಸಲು ಹೋದಾಗ ಹಾವು ಕಚ್ಚಿ ಉರಗ ತಜ್ಞರೊಬ್ಬರು ಸಾವನಪ್ಪಿರುವ ಘಟನೆ ಬೆಳ್ತಂಗಡಿಯ ಇಳಂತಿಲ ಎಂಬಲ್ಲಿ ನಡೆದಿದೆ. ಮೃತರನ್ನು ಉಪ್ಪಿನಂಗಡಿಯ ನೆಕ್ಕಿಲಾಡಿ ನಿವಾಸಿ ಮುಸ್ತಫಾ (30) ಎಂದು ಗುರುತಿಸಲಾಗಿದೆ.


ಇವರು ಬೆಳ್ತಂಗಡಿಯ ಇಳಂತಿಲ ಎಂಬಲ್ಲಿ ಮನೆಯೊಂದರ ಕೋಳಿ ಗೂಡಿನ ಒಳಗೆ ಸಿಲುಕಿಕೊಂಡಿದ್ದ ನಾಗರಹಾವನ್ನು ಹಿಡಿಯಲು ಹೋದ ಸಂದರ್ಭ ಹಾವು ಇವರ ಎರಡೂ ಕೈಗಳಿಗೆ ಕಚ್ಚಿದೆ. ಕೂಡಲೇ ಅವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ.


ಮುಸ್ತಫಾ ಅವರು ಹಾವು ಹಿಡಿಯುದರಲ್ಲಿ ನಿಪುಣರಾಗಿದ್ದು, ಹಲವು ಜಾತಿಯ ಹಾವುಗಳನ್ನು ರಕ್ಷಣೆ ಮಾಡಿದ್ದರು. ಅಲ್ಲದೆ ಇವರ ಸಾಮಾಜಿಕ ಕಾರ್ಯಗಳಿಗೆ ಹಲವು‌ ಸಂಘಸಂಸ್ಥೆಗಳು ಸನ್ಮಾನ ಕೂಡಾ ಮಾಡಿದ್ದವು.
ಮನೆಯವರು ಮುಸ್ತಫಾ ಹಾವು ಹಿಡಿಯುವುದನ್ನು ವಿಡಿಯೋ ಮಾಡಿದ್ದ, ಅದರಲ್ಲಿ ಹಾವು ಮುಸ್ತಫಾ ಅವರ ಕೈಗೆ ಕಚ್ಚಿರುವ ದೃಶ್ಯ ದಾಖಲಾಗಿದೆ.