Connect with us

    LATEST NEWS

    ಸ್ಮಾರ್ಟ್ ಸಿಟಿ ಯೋಜನೆಯಡಿ ಅಂತರ್ ಇಲಾಖೆಗಳ ಅಭಿವೃದ್ಧಿ ಕಾಮಗಾರಿ ಪರಿಶೀಲನೆ

    ಸ್ಮಾರ್ಟ್ ಸಿಟಿ ಯೋಜನೆಯಡಿ ಅಂತರ್ ಇಲಾಖೆಗಳ ಅಭಿವೃದ್ಧಿ ಕಾಮಗಾರಿ ಪರಿಶೀಲನೆ

    ಮಂಗಳೂರು ಏಪ್ರಿಲ್ 05 ; ಸ್ಮಾರ್ಟ್ ಸಿಟಿ ಯೋಜನೆಯಡಿ ಮಂಗಳೂರು ನಗರವನ್ನು ಸ್ಮಾರ್ಟ್ ಆಗಿ ಅಭಿವೃದ್ಧಿಪಡಿಸಲು ಕೈಗೊಂಡ ಕಾಮಗಾರಿ ಹಾಗೂ ಅವುಗಳ ಪ್ರಗತಿಯನ್ನು ತಿಂಗಳ ಪ್ರತೀ ಶನಿವಾರ ಪಿಪಿಟಿಯಲ್ಲಿ ಗೂಗಲ್ ಮ್ಯಾಪ್ ಫೋಟೋಗಳ ಮೂಲಕ ವರದಿ ನೀಡಿ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಅವರು ಆದೇಶಿಸಿದರು.

    ಮಂಗಳೂರು ಮಹಾನಗರಪಾಲಿಕೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಅಂತರ್ ಇಲಾಖೆಗಳ ಅಭಿವೃದ್ಧಿ ಕಾಮಗಾರಿ ಪರಿಶೀಲನೆಗೆ ಕೈಗೊಂಡ ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಮಹಾನಗರಪಾಲಿಕೆ, ಲೋಕೋಪಯೋಗಿ ಇಲಾಖೆಗಳನ್ನೊಳಗೊಂಡಂತೆ ಹಲವು ಇಲಾಖೆಗಳು ವಿವಿಧ ಏಜೆನ್ಸಿ ಮುಖಾಂತರ ಕಾಮಗಾರಿಗಳನ್ನು ಅನುಷ್ಠಾನಕ್ಕೆ ತರುತ್ತಿದ್ದು, ಇಲಾಖೆಗಳ ನಡುವೆ ಸಮನ್ವಯತೆ ಕೊರತೆಯಿಂದ ಬಹಳಷ್ಟು ಕಾಮಗಾರಿಗಳು ಪುನಾರವರ್ತನೆಯಾಗುವಂತಹುದು ಹಾಗೂ ಕಾಮಗಾರಿಗಳಲ್ಲಿ ವಿಳಂಬವಾಗುತ್ತಿರುವುದರ ಬಗ್ಗೆ ಜಿಲ್ಲೆಯ ಜನರೂ ಗಮನಸೆಳೆಯುತ್ತಿದ್ದಾರೆ.

    ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನ ವೇಳೆ ಸಮನ್ವಯತೆ ಹಾಗೂ ಸಮಯಮಿತಿಯೊಳಗೆ ಕಾಮಗಾರಿ ನಡೆಸಲು ಇಚ್ಛಾಶಕ್ತಿ ಹೊಂದಿರುವ ಸಮಿತಿಯ ಅಗತ್ಯವಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಬಿಎಸ್‍ಎನ್‍ಎಲ್, ಮೆಸ್ಕಾಂ, ರೈಲ್ವೇಸ್, ಪೊಲೀಸ್ ಇಲಾಖೆಯವರು ಸಮನ್ವಯದಿಂದ ಕರ್ತವ್ಯ ನಿರ್ವಹಿಸಬೇಕು.

    ಸ್ಥಳೀಯ ಜನರ ಅಗತ್ಯಗಳನ್ನು ಗುರುತಿಸಿ ಕಾಮಗಾರಿಗಳಿಗೆ ಮಾನದಂಡಗಳನ್ನು ನಿಗದಿಪಡಿಸಿ ಯಾರ ಮೂಲಕ ಕಾಮಗಾರಿ ನಡೆಸುತ್ತೀರೋ ಅವರನ್ನು ನಿಯಂತ್ರಣದಲ್ಲಿಟ್ಟುಕೊಂಡು ಸಮನ್ವಯದಿಂದ, ಯೋಜನಾಬದ್ಧವಾಗಿ ಯೋಜನೆಗಳು ಅನುಷ್ಠಾನಕ್ಕೆ ಬರಬೇಕು ಎಂದು ನಿರ್ದೇಶನ ನೀಡಿದರು.

    ಕಾಮಗಾರಿ ಪ್ರಗತಿ ಪರಿಶೀಲನೆಗೆ ಪೂರಕವಾಗಿ ತಾಂತ್ರಿಕ ಅಧಿಕಾರಿಗಳ ವೇದಿಕೆಯೊಂದನ್ನು ರಚಿಸಿ ಪ್ರತಿ ತಿಂಗಳ ಮೊದಲನೇ ಶನಿವಾರ ಪ್ರಗತಿಪರಿಶೀಲನೆ ಸಭೆ ಪಿಪಿಟಿಯಲ್ಲಿ ಗೂಗಲ್ ಮ್ಯಾಪ್ ಮೂಲಕ ನೈಜ ಅಭಿವೃದ್ಧಿ ನಕ್ಷೆಯನ್ನು ತೋರಿಸಿ ಪ್ರಗತಿ ವರದಿ ನೀಡಬೇಕೆಂದು ಜಿಲ್ಲಾಧಿಕಾರಿಗಳು ಆದೇಶಿಸಿದರು.

    ಸ್ಮಾರ್ಟ್ ಸಿಟಿ ಎಂಡಿಯವರು ತಾಂತ್ರಿಕ ಪರಿಣತಿಯುಳ್ಳವರನ್ನು ನೇಮಕಮಾಡಿ ಗೂಗಲ್ ಮ್ಯಾಪ್ ಮುಖಾಂತರ ಯುಪಿಒಆರ್ ಮುಖಾಂತರ ಹಾಗೂ ಸರ್ವೇ ಇಲಾಖೆ ಮುಖಾಂತರ ಅಗತ್ಯ ಮಾಹಿತಿಗಳನ್ನು ಕಲೆ ಹಾಕಿ ಅಭಿವೃದ್ಧಿ ಯೋಜನೆ ಅನುಷ್ಠಾನಕ್ಕೆ ತನ್ನಿ; ಮುಂದಿನ ಸಭೆಯಲ್ಲಿ ನಡವಳಿಗೆ ಅನುಪಾಲನಾ ವರದಿಯೊಂದಿಗೆ ಹಾಜರಾಗಬೇಕೆಂದರು.

    ಸ್ಮಾರ್ಟ್ ಸಿಟಿ ಅಂತರ್ ಇಲಾಖೆ ಸಭೆಗಳು ನಾಮ್ ಕೆ ವಾಸ್ತೇ ಸಭೆಯಾಗದೆ ಪ್ರತಿ ತಿಂಗಳು ಅಭಿವೃದ್ಧಿಯಾದ ನಿಖರ ಮಾಹಿತಿಗಳಿರಬೇಕು. ಯೋಜನೆಗಳ ಅನುಕೂಲದ ಬಗ್ಗೆ ಜನರಿಗೆ ತಿಳಿಸಿದರೆ ನಗರದ ಜನತೆ ಒಳ್ಳೆಯವರಿದ್ದು ಖಂಡಿತಾ ಸಹಕಾರ ನೀಡುತ್ತಾರೆ ಎಂದರು. ನಗರದೊಳಗೆ ಹಾಗೂ ಅವಕಾಶವಿದ್ದಲ್ಲಿ ನಗರದ ಹೊರಗೆ ಮಂಗಳೂರು ವಿಶ್ವವಿದ್ಯಾಲಯಗಳವರೆಗೂ ಸೋಲಾರ್ ಅಳವಡಿಕೆಗೆ ಯೋಜನೆಗಳನ್ನು ರೂಪಿಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಿದರು.

    Share Information
    Advertisement
    Click to comment

    You must be logged in to post a comment Login

    Leave a Reply