ಗುವಾಹಟಿ ಸೆಪ್ಟೆಂಬರ್ 19: ಸ್ಕೂಬಾ ಡೈವಿಂಗ್ ವೇಳೆ ನೀರಿಗೆ ಬಿದ್ದು ಅಸ್ಸಾಂ ಮೂಲದ ಬಾಲಿವುಡ್ ಗಾಯಕ ಜುಬಿನ್ ಗರ್ಗ್‌ ಅವರು ಮೃತಪಟ್ಟಿದ್ದಾರೆ. 52 ವರ್ಷದ ಅಸ್ಸಾಂ ಗಾಯಕ ಜುಬಿನ್ ‘ಈಶಾನ್ಯ ಭಾರತ ಹಬ್ಬ’ಕ್ಕೆ ತೆರಳಿದ್ದರು. ಸೆ.20,21ರಂದು ಅವರು ಪ್ರದರ್ಶನ ನೀಡಬೇಕಿತ್ತು.


ಜುಬಿನ್‌ ಸ್ಕೂಬಾ ಡೈವಿಂಗ್‌ ವೇಳೆ ನೀರಿಗೆ ಬಿದ್ದಿದ್ದಾರೆ. ಕೂಡಲೇ ಅವರನ್ನು ರಕ್ಷಣೆ ಮಾಡಿ ಸಿಪಿಆರ್‌ ನೀಡಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಸಿಂಗಪುರ ಜನರಲ್‌ ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ.
ಜುಬಿನ್‌, ಬಾಲಿವುಡ್‌ನ ಗ್ಯಾಂಗ್‌ಸ್ಟರ್‌ ಚಿತ್ರದ ‘ಯಾ ಅಲಿ’, ಕ್ರಿಶ್‌ 3 ಚಿತ್ರದ ‘ದಿಲ್‌ ತು ಹೈ ಪತಾ’ ಹಾಗೂ ಅಸ್ಸಾಂ, ಬೆಂಗಾಳಿ ಚಲನಚಿತ್ರಗಳಿಗೆ ಹಾಡುಗಳನ್ನು ಹಾಡಿದ್ದಾರೆ.

ಜುಬಿನ್ ಸಾವಿನ ಕುರಿತು ಸಂತಾಪ ವ್ಯಕ್ತಪಡಿಸಿರುವ ಅಸ್ಸಾಂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಅಶೋಕ್ ಸಂಘಲ್‌, ‘ನಮ್ಮ ಪ್ರೀತಿಯ ಜುಬಿನ್ ಗರ್ಗ್‌ ಸಾವು ಅತೀವ ದುಃಖ ತಂದಿದೆ. ಅಸ್ಸಾಂ ಕೇವಲ ಧ್ವನಿಯನ್ನು ಕಳೆದುಕೊಂಡಿಲ್ಲ, ಹೃದಯಬಡಿತವನ್ನು ಕಳೆದುಕೊಂಡಿದೆ. ಜುಬಿನ್ ಕೇವಲ ಗಾಯಕರಲ್ಲ ಅಸ್ಸಾಂ ಮತ್ತು ದೇಶದ ಹೆಮ್ಮೆ’ ಎಂದು ಬರೆದುಕೊಂಡಿದ್ದಾರೆ.

Share Information