LATEST NEWS
ಖ್ಯಾತ ಗಾಯಕ ಜಸ್ಟಿನ್ ಬೈಬರ್ ಮುಖಕ್ಕೆ ಪಾರ್ಶ್ವವಾಯು..ಹಾಡಲು ಆಗದ ಸ್ಥಿತಿಯಲ್ಲಿ ಗಾಯಕ
ಅಮೇರಿಕಾ: ವಿಶ್ವವಿಖ್ಯಾತ ಗಾಯಕ ಗಾಯಕ ಜಸ್ಟಿನ್ ಬೈಬರ್ ಮುಖಕ್ಕೆ ಪಾರ್ಶ್ವವಾಯು ಆಗಿದ್ದು, ಅವರು ಹಾಡಲು ಆಗದಂತ ಪರಿಸ್ಥಿತಿಗೆ ಬಂದಿದ್ದಾರೆ. ಈ ಬಗ್ಗೆ ಅವರು ಇನ್ಸ್ಟಾಗ್ರಾಂ ಪೇಜ್ ನಲ್ಲಿ ವಿಶೇಷ ಪೋಸ್ಟ್ ಹಂಚಿಕೊಂಡಿದ್ದಾರೆ.
ramsay hunt syndrome ಕಾಯಿಲೆಯಿಂದ ( ವೈರಸ್ ) ಜಸ್ಟಿನ್ ಬಳಲುತ್ತಿದ್ದಾರೆ. ಇದರಿಂದ ಅವರ ಮುಖಕ್ಕೆ ಪಾರ್ಶ್ವವಾಯು ಹೊಡೆದಿದೆ. ಕೆಲವರು ನಾನು ಕೆಲ ಕಾರ್ಯಕ್ರಮಗಳನ್ನು ಕ್ಯಾನ್ಸಲ್ ಮಾಡಿದೆ ಎಂದು ಹೇಳುತ್ತಿದ್ದಿರಿ. ಆದರೆ ನಾನು ದೈಹಿಕವಾಗಿ ಹಾಡು ಹಾಡಲಾಗುತ್ತಿಲ್ಲ. ಹಾಡುವ ಸ್ಥಿತಿಯಲ್ಲಿಯೂ ಇಲ್ಲ ಎಂದಿದ್ದಾರೆ.
ಈಗಿನ ಪರಿಸ್ಥಿತಿಯಲ್ಲಿ ನಾನು ನಗಲು ಆಗುತ್ತಿಲ್ಲ, ನನ್ನ ಮುಖದ ಒಂದು ಸೈಡ್ ನಲ್ಲಿ ಯಾವುದೇ ರೀತಿಯ ಸ್ಪರ್ಶ ಇಲ್ಲವಾಗಿದ್ದು. ನನ್ನ ಮುಖದ ಒಂದು ಪಕ್ಕಕ್ಕೆ ಸಂಪೂರ್ಣ ಪಾರ್ಶ್ವವಾಯು ಹೊಡೆದಿದೆ. ನಾನು ಈ ಸಮಯದಲ್ಲಿ ವಿಶ್ರಾಂತಿ ಪಡೆಯುವೆ. 100% ಗುಣಮುಖನಾಗಿ ಮತ್ತೆ ನಿಮ್ಮ ಮುಂದೆ ಬರುವೆ. ನಾನು ಏನು ಮಾಡಲಿಕ್ಕಾಗಿ ಹುಟ್ಟಿದ್ದೆನೋ ಅದನ್ನು ನಾನು ಆಗ ಮಾಡುವೆ” ಎಂದು ಜಸ್ಟಿನ್ ಹೇಳಿದ್ದಾರೆ.
You must be logged in to post a comment Login