Connect with us

    LATEST NEWS

    ವೇದಿಕೆಯಲ್ಲೇ ಹಾಡುತ್ತಿರುವಾಗಲೇ ಸಾವನಪ್ಪಿದ ಗಾಯಕ ಜೆರಾಲ್ಡ್ ಓಸ್ವಾಲ್ ಡಿಸೋಜ

    ವೇದಿಕೆಯಲ್ಲೇ ಹಾಡುತ್ತಿರುವಾಗಲೇ ಸಾವನಪ್ಪಿದ ಗಾಯಕ ಜೆರಾಲ್ಡ್ ಓಸ್ವಾಲ್ ಡಿಸೋಜ

    ಮಂಗಳೂರು ಸೆಪ್ಟೆಂಬರ್ 4: ವೇದಿಕೆಯಲ್ಲಿ ಹಾಡುತ್ತಿರುವಾಗಲೇ ಕುಸಿದು ಬಿದ್ದು ಗಾಯಕನೊಬ್ಬ ಮೃತಪಟ್ಟಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

    ಕೊಂಕಣಿ ಸಿಂಗರ್, ಸಂಗೀತ ಸಂಯೋಜಕ ಜೆರಿ ಡಿಸೋಜಾ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಮಂಗಳೂರಿನ ಬಿಜೈನಲ್ಲಿ ನಿನ್ನೆ ನಡೆದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಈ ಘಟನೆ ನಡೆದಿದೆ. ಗಣೇಶೋತ್ಸವದ ಹಿನ್ನಲೆಯಲ್ಲಿ ಸಂಗೀತ ರಸಮಂಜರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ಜೆರಾಲ್ಡ್ ಓಸ್ವಾಲ್ ಡಿಸೋಜ ಅವರು ಹಾಡೊಂದು ಹಾಡುತ್ತಿರುವಾಗಲೇ ಕುಸಿದು ಬಿದ್ದಿದ್ದಾರೆ.

    ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಆಸ್ಪತ್ರೆಗೆ ಸಾಗಿಸುವಾಗಲೇ ದಾರಿ ಮಧ್ಯೆ ಅವರು ಮೃತಪಟ್ಟಿದ್ದಾರೆ. ಘಟನೆ ಕುರಿತಂತೆ ಕದ್ರಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

    VIDEO

    Share Information
    Advertisement
    Click to comment

    You must be logged in to post a comment Login

    Leave a Reply