ನಿಗೂಢವಾಗಿ ನಾಪತ್ತೆಯಾಗಿರುವ ಕಾಫಿ ಕಿಂಗ್ ಸಿದ್ದಾರ್ಥ ಪತ್ತೆ ಕಾರ್ಯಾಚರಣೆ ಸ್ಥಗಿತ

ಮಂಗಳೂರು ಜುಲೈ 30: ನೇತ್ರಾವತಿ ಸೇತುವೆ ಸಮೀಪದಿಂದ ನಿಗೂಢ ನಾಪತ್ತೆಯಾಗಿರುವ ಕಾಫಿ ಕಿಂಗ್ ಸಿದ್ದಾರ್ಥ ಅವರ ಪತ್ತೆ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.

ಸೋಮವಾರ ರಾತ್ರಿಯಿಂದ ಆರಂಭಿಸಿದ ಪತ್ತೆ ಕಾರ್ಯಾಚರಣೆಯು ಮಂಗಳವಾರ ಬೆಳಿಗ್ಗೆ 3 ಗಂಟೆ ತನಕವೂ ನಡೆದಿತ್ತು, ನಂತರ ಮಂಗಳವಾರ ಬೆಳಿಗ್ಗೆ 6 ಗಂಟೆಯಿಂದ ಪ್ರಾರಂಭವಾದ ಪತ್ತೆ ಕಾರ್ಯಾಚರಣೆ ಸಂಜೆಯವರೆಗೂ ಮುಂದುವರೆಸಲಾಗಿತ್ತು, ಅಲ್ಲದೆ ಕತ್ತಲಾಗುತ್ತಿದ್ದಂತೆ ಜನರೇಟರ್ ಸಹಾಯದಿಂದ ಲೈಟ್ ಬಳಿಸ ಕಾರ್ಯಾಚರಣೆ ನಡೆಸಲಾಯಿತು.

ಆದರೆ ಉಳ್ಳಾಲ ಸೇತುವೆ ಕೆಳಭಾಗದ ಪ್ರದೇಶ ತೀರಾ ಅಪಾಯಕಾರಿ ಸ್ಥಳವಾಗಿದ್ದು, ನೇತ್ರಾವತಿ ನದಿ ಕೂಡ ತುಂಬಿ ಹರಿಯುತ್ತಿದೆ. ಅಲ್ಲದೆ ಕೆಳಮುಖವಾಗಿ ನೀರು ಬಿರುಸಿನಿಂದ ಹರಿಯುತ್ತಿದೆ. ಈ ಹಿನ್ನಲೆಯಲ್ಲಿ ರಾತ್ರಿ ಕಾರ್ಯಾಚರಣೆಯಲ್ಲಿ ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸಂಥಿಲ್ ತಿಳಿಸಿದ್ದಾರೆ. ಕಾಫಿ ಡೇ ನಿರ್ದೇಶಕ ಸಿದ್ದಾರ್ಥ ನಾಪತ್ತೆಯಾಗಿರುವ ಉಳ್ಳಾಲ ಸೇತುವೆ ಪ್ರದೇಶದಲ್ಲಿ ಭದ್ರತೆಗಾಗಿ ಪೊಲೀಸ್ ರನ್ನು ನಿಯೋಜಿಸಲಾಗಿದೆ.

Facebook Comments

comments