Connect with us

    FILM

    2 ವರ್ಷಗಳ ಬಳಿಕ ತಮಗೆ ಮಗು ಜನಿಸಿರುವ ವಿಚಾರವನ್ನು ಬಹಿರಂಗ ಪಡಿಸಿದ ನಟಿ ಶ್ರಿಯಾ ಶರಣ್

    ಖ್ಯಾತ ನಟಿ ಶ್ರಿಯಾ ಶರಣ್ 2 ವರ್ಷಗಳ ನಂತರ ತಮಗೆ ಹೆಣ್ಣು ಮಗು ಜನಿಸಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. ಶ್ರಿಯಾ ಶರಣ್ 2018ರಲ್ಲಿ ರಷ್ಯನ್ ಬಾಯ್‌ಫ್ರೆಂಡ್ ಆಂಡ್ರೇ ಕೊಶ್ಚೀವ್‌ ಜೊತೆ ದಾಂಪತ್ಯ ಬದುಕಿಗೆ ಕಾಲಿಟ್ಟ ಬಳಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದರೂ ಕೂಡ ತಮ್ಮ ಮಗುವಿನ ಬಗ್ಗೆ ಮಾಹಿತಿ ಬಿಟ್ಟುಕೊಟದ ಅವರು 2 ವರ್ಷಗಳ ನಂತರ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ.


    2001ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಶ್ರಿಯಾ ಶರಣ್‍ಗೆ 2020ರ ಲಾಕ್‍ಡೌನ್ ಸಂದರ್ಭದಲ್ಲಿಯೇ ಮಗು ಜನಿಸಿತ್ತು. ಆದರೆ ಈ ವಿಚಾರವನ್ನು ಅವರು ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಮಗು ಜನಿಸಿ ಸುಮಾರು ಎರಡು ವರ್ಷ ಆಗುತ್ತಾ ಬಂದಿದೆ. ಈಗ ಶ್ರಿಯಾ ಈ ವಿಚಾರ ಬಿಚ್ಚಿಟ್ಟಿದ್ದಾರೆ. 2 ವರ್ಷಗಳ ನಂತರ ಈ ವಿಚಾರವಾಗಿ ಬಾಯಿ ಬಿಟ್ಟಿರುವುದಕ್ಕೆ ಅಭಿಮಾನಿಗಳೂ ನಿಖಕ್ಕೂ ಆಶ್ಚರ್ಯವನ್ನು ವ್ಯಕ್ತಪಡಿಸಿದ್ದಾರೆ.


    2020ರ ಕ್ವಾರಂಟೈನ್ ತುಂಬಾನೇ ಅದ್ಭುತವಾಗಿತ್ತು. ಇಡೀ ಪ್ರಪಂಚವು ಕಷ್ಟದಲ್ಲಿ ಸಾಗುತ್ತಿರುವಾಗ, ನಮ್ಮ ಪ್ರಪಂಚವು ಬದಲಾಯಿತು. ನಮಗೆ ಆ ಸಂದರ್ಭದಲ್ಲಿ ಹೆಣ್ಣುಮಗುವಾಗಿದೆ ಎಂದು ಬರೆದುಕೊಂಡು ಒಂದು ವೀಡಿಯೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ.

    ಈ ವಿಚಾರ ಕೇಳಿ ಅಭಿಮಾನಿಗಳು ನಿಜಕ್ಕೂ ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಟಿಗೆ ಕೆಲವು ಪ್ರಶ್ನೆಗಳು ಎದುರಾಗಿವೆ. ಕೋವಿಡ್ ಲಾಕ್‍ಡೌನ್ ಸಮಯದಲ್ಲಿ ನಮ್ಮ ಕುಟುಂಬಕ್ಕೆ ಹೊಸ ಅತಿಥಿ ಬಂದಿರುವ ವಿಚಾರವನ್ನು ತಿಳಿಸುವುದು ಸೂಕ್ತವಾಗಿರಲಿಲ್ಲ ಎಂದು ಈ ಬಗ್ಗೆ ತಿಳಿಸದಕ್ಕೆ ಕಾರಣ ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply