Connect with us

LATEST NEWS

ಮಂಗಳೂರು ಸಮೀಪ ಹಳಿ ತಪ್ಪಿದ ಶ್ರಮಿಕ್‌ ರೈಲು

ಮಂಗಳೂರು ಸಮೀಪ ಹಳಿ ತಪ್ಪಿದ ಶ್ರಮಿಕ್‌ ರೈಲು

ಮಂಗಳೂರು ಮೇ.19: ಕೇರಳದ ತ್ರಿಶೂರ್ ನಿಂದ ಜೈಪುರಕ್ಕೆ ತರೆಳುವ ಶ್ರಮಿಕ್ ಸ್ಪೆಷಲ್ ರೈಲಿನ ಎಂಜಿನ್ ಹಳಿ ತಪ್ಪಿರುವ ಘಟನೆ ಮಂಗಳೂರಿನ ಪಡಿಲ್ ಬಳಿ ನಡೆದಿದೆ.

ಇಲ್ಲಿನ ಪಡೀಲ್ ಬಳಿ ಮಧ್ಯರಾತ್ರಿ ಈ ಘಟನೆ ನಡೆದಿದೆ. ಕೇರಳದ ತ್ರಿಶೂರ್‌ನಿಂದ ಜೈಪುರ್‌ಗೆ ತೆರಳುವ ಶ್ರಮಿಕ್ ಸ್ಪೆಷಲ್ ಎಕ್ಸ್‌ಪ್ರೆಸ್‌ ಮಂಗಳೂರಿನ ಪಡೀಲ್ ರೈಲ್ವೆ ಹಳಿಯಲ್ಲಿ ರಾತ್ರಿ ಸುಮಾರು 2 ಗಂಟೆಗೆ ಹಳಿ ತಪ್ಪಿದ್ದು, ಮುಂಜಾನೆ 4ರ ವೇಳೆಗೆ ಕಾರ್ಮಿಕರ ಪ್ರಯಾಣಕ್ಕೆ ಬದಲಿ ಎಂಜಿನ್ ವ್ಯವಸ್ಥೆ ಮಾಡಲಾಗಿದೆ. ಸದ್ಯಕ್ಕೆ ಹಳಿ ತಪ್ಪಿರುವ ರೈಲ್ವೆ ಎಂಜಿನ್‌ ತೆರವು ಕಾರ್ಯ ಪ್ರಗತಿಯಲ್ಲಿದೆ. ಘಟನೆಯಲ್ಲಿ ಯಾವುದೇ ಹಾನಿಯಾಗಿಲ್ಲ.

Facebook Comments

comments