ಮುಸ್ಲಿಮ್ ಜನಸಂಖ್ಯೆ ಹೆಚ್ಚಾದ ಪ್ರದೇಶದಲ್ಲಿ ಪಾಕಿಸ್ಥಾನ ವಿರೋಧಿ ಘೋಷಣೆ ಕೂಗುವಂತಿಲ್ಲ- ಗೊಂದಲ ಮೂಡಿಸಿದ ಸುಳ್ಯ ಎಸ್.ಐ ಸ್ಪಷ್ಟನೆ

ಮಂಗಳೂರು, ಫೆಬ್ರವರಿ 20: ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರ ಮೇಲೆ ಕೇಸು ದಾಖಲಿಸುತ್ತೇವೆ ಎಂದು ಬೆದರಿಸಿದ ಸುಳ್ಯ ಎಸ್.ಐ ತನ್ನ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಪ್ರತಿಭಟನೆ ನಡೆಸುತ್ತಿದ್ದ ಸ್ಥಳ ಮುಸ್ಲಿಂ ಬಾಹುಳ್ಯವಿರುವ ಪ್ರದೇಶವಾದ ಕಾರಣ ಪಾಕಿಸ್ಥಾನದ ವಿರುದ್ಧ ಘೋಷಣೆ ಮಂಜುನಾಥ್ ನೀತಿ ಟ್ರಸ್ಟ್ ನ ಜಯನ್ ಎನ್ನುವವರಿಗೆ ತಿಳಿಸಿದ್ದಾರೆ.

ಇದರಿಂದ ಕುಪಿತಗೊಂಡ ನೀತಿ ಟ್ರಸ್ಟ್ ಇದೀಗ ಸುಳ್ಯ ಎಸ್.ಐ ವಿರುದ್ಧ ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದಾರೆ.

ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರ ಬಾಂಬ್ ದಾಳಿಗೆ ಸಿಲುಕಿ ಮೃತಪಟ್ಟ ಯೋಧರಿಗೆ ಶ್ರದ್ಧಾಂಜಲಿ ಸಭೆಯನ್ನು ಜನವರಿ 16 ರಂದು ಸುಳ್ಯದಲ್ಲಿ ನಡೆಸಲಾಗಿತ್ತು.

ಈ ಸಂದರ್ಭದಲ್ಲಿ ಪಾಕಿಸ್ಥಾನಕ್ಕೆ ಬಾಂಬ್ ಹಾಕಿ ಎಂದು ಆಕ್ರೋಶ ಭರಿತ ಘೋಷಣೆಗಳನ್ನು ಕೂಗಲಾಗಿತ್ತು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಎಸ್.ಐ ಮಂಜುನಾಥ್ ಘೋಷಣೆ ಕೂಗಿದವರನ್ನು ಬೆದರಿಸಿದ್ದಾರಲ್ಲದೆ, ಕೇಸು ಹಾಕಿ ಜೈಲಿಗೆ ತಳ್ಳುವ ಬೆದರಿಕೆಯನ್ನೂ ನೀಡಿದ್ದರು.

ಈ ಸಂಬಂಧ ಎಸ್.ಐ ವಿರುದ್ಧ ದಕ್ಷಿಣಕನ್ನಡ ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿಗೂ ದೂರು ನೀಡಲಾಗಿದೆ.

ಈ ನಡುವೆ ಘಟನೆಯ ಬಗ್ಗೆ ಮಾಹಿತಿ ಪಡೆಯಲು ಎಸ್.ಐ ಅವರನ್ನು ಸಂಪರ್ಕಿಸಿದ ನೀತಿ ಟ್ರಸ್ಟ್ ನ ಜಯನ್ ಗೆ ಮುಸ್ಲಿಂ ಬಾಹುಳ್ಯದ ಪ್ರದೇಶವಾಗಿರುವುದರಿಂದ ಘೋಷಣೆಗೆ ಅಡ್ಡಿಪಡಿಸಿರುವುದಾಗಿ ಒಪ್ಪಿಕೊಂಡಿದ್ದಾರೆ.

ಸುಳ್ಯ ಎನ್ನುವುದು ಪಾಕಿಸ್ಥಾನದಲ್ಲಿರುವುದೋ, ಭಾರತದಲ್ಲಿರುವುದೋ ಎನ್ನುವ ವಿವೇಚನೆಯಿಲ್ಲದ ಈ ಅಧಿಕಾರಿಯ ವಿರುದ್ಧ ದೇಶದ್ರೋಹದಡಿ ಕ್ರಮ ಕೈಗೊಳ್ಳಬೇಕೆಂದು ನೀತಿ ಟ್ರಸ್ಟ್ ಆಗ್ರಹಿಸಿದೆ.

ಪಾಕಿಸ್ಥಾನದ ವಿರುದ್ಧ ಘೋಷಣೆ ಕೂಗಿದಲ್ಲಿ ಸುಳ್ಯದ ಮುಸ್ಲಿಂ ಪ್ರದೇಶದಲ್ಲಿ ನೋವಾಗುವುದಿದ್ದರೆ, ಆ ಪ್ರದೇಶದಲ್ಲಿ ಪಾಕಿಸ್ಥಾನದ ಪರವಾಗಿ ಕೆಲಸ ಮಾಡುವ ಜನರಿದ್ದಾರೆ ಎನ್ನುವುದು ಸ್ಪಷ್ಟವಾಗಿದ್ದು, ಈ ಬಗ್ಗೆಯೂ ಉನ್ನತ ತನಿಖೆ ನಡೆಯಬೇಕೆಂದು ಟ್ರಸ್ಟ್ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.

Facebook Comments

comments