ಬೆಳ್ತಂಗಡಿ ಸೆಪ್ಟೆಂಬರ್ 11: ಧರ್ಮಸ್ಥಳ ಪ್ರಕರಣದ ತನಿಖೆಯಲ್ಲಿ ಇದೀಗ ಅತೀ ದೊಡ್ಡ ತಿರುವು ಸಿಕ್ಕಿದ್ದು, ಸೌಜನ್ಯ ಮಾವ ವಿಠಲ ಗೌಡ ಅವರನ್ನು ಬಂಗ್ಲಗುಡ್ಡ ಪ್ರದೇಶದಲ್ಲಿ ಮಹಜರಿಗೆ ಕರೆದುಕೊಂಡ ಹೋದ ವೇಳೆ ಅಲ್ಲಿ ಹೆಣಗಳ ರಾಶಿಯೇ ಸಿಕ್ಕಿದೆ ಎಂದು ಹೇಳಿದ್ದಾರೆ.


ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಾತನಾಡಿದರುವ ಅವರು ಬಂಗ್ಲೆಗುಡ್ಡ ಪ್ರದೇಶಕ್ಕೆ ಎರಡು ಸಲ ಕರೆದಕೊಂಡು ಹೋಗಿದ್ದಾರೆ. ಸ್ಪಾಟ್ ಮಹಜರಿಗೆ ಕರೆದುಕೊಂಡು ಹೋದಾಗ ಅಲ್ಲಿ ಮೂರು ಮನುಷ್ಯರ ಕಳೆ ಬರಹ ಸಿಕ್ಕಿದೆ. ಬಳಿಕ ಅಲ್ಲೆ ಪಕ್ಕದ ಒಂದು 10 ಫೀಟ್ ಅಲ್ಲಿ ಎರಡನೇ ಸ್ಥಳ ಮಹಜರಿಗೆ ಹೋದಾಗ ಅಲ್ಲಿ ಕೆಳಗಡೆ ಹೆಣಗಳ ರಾಶಿ ಕಾಣಿಸಿದೆ. ಕಣ್ಣಿಗೆ ಕಂಡದ್ದು 5 ಹೆಣಗಳು, ಸಣ್ಣ ಮಗುವಿನ ಎಲುಬು ಇದೆ ಎಂದು ಗೋಚರ ಆಗುತ್ತಿತ್ತು ಎಂದಿದ್ದಾರೆ. ಅಲ್ಲೆ ಪಕ್ಕದಲ್ಲಿ ಈ ವಾಮಾಚಾರಕ್ಕೆ ಬಳಸುವಂತಹ ಕಳಶದ ವಸ್ತುಗಳು ಇದ್ದವು ಎಂದಿದ್ದಾರೆ.


ಹೆಣವನ್ನು ಮುಚ್ಚು ಹಾಕಲು ಮಣ್ಣು ಗುಡ್ಡ ಜರಿದ ರೀತಿ ಇದ್ದು, ಅಲ್ಲಿ ಬುರಡೆಗಳ ರಾಶಿ ಇದ್ದು, ಎಲುಬುಗಳೆಲ್ಲಾ ಸ್ಪ್ರೆಡ್ ಆಗಿದೆ. ಕಳೆಬರಹ ಕೆಲವು ಮಣ್ಣಿನ ಒಳಗಡೆ ಇದ್ದು, ಬುರುಡೆ ಹೊರಗಡೆ ಇತ್ತು. ತನಿಖೆಗೆ ಯಾವಾಗ ಕರೆದರೂ ಬರ್ತೇನೆ ಅಂತ ಹೇಳಿದ್ದೇನೆ. ಚಿನ್ನಯ್ಯ, ತಾನಾಸಿ, ರಂಗ, ಸುಬ್ರಹ್ಮಣ್ಯ ಎಲ್ಲ ಹೇಳಿದ್ದಾರೆ. ಅವರ ಮಾಹಿತಿ ಪ್ರಕಾರ ಜಾಗ ತೋರಿಸಲು ತಯಾರಾಗಿದ್ದೇನೆ. ಅದೇ ಊರಲ್ಲಿ ಇದ್ದು ಒಂದೇ ಕಡೆ ರಾಶಿ ಹಾಕಿದ್ದು ನೋಡಿ ಅಚ್ಚರಿ ಆಗಿದೆ. ಚಿನ್ನಯ್ಯ ಹೇಳಿದ್ದು ನೂರಕ್ಕೆ ನೂರು ಸತ್ಯ, ಅದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ ಚಿನ್ನಯ್ಯ ಹೇಳಿದ್ದು ನೂರಕ್ಕೆ ನೂರು ಸತ್ಯ ಎಂದಿದ್ದಾರೆ.

Share Information