ಸಂಸದೆ ಶೋಭಾಕರಂದ್ಲಾಜೆ ಲೋಕಸಭೆ ಮುಖ್ಯ ಸಚೇತಕಿಯಾಗಿ ಆಯ್ಕೆ

ಉಡುಪಿ ಜೂನ್ 12: ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಲೋಕಸಭೆ ಮುಖ್ಯ ಸಚೇತಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಕರಾವಳಿಯ ಸಂಸದರಿಗೆ ಪ್ರಮುಖ ಹುದ್ದೆ ದೊರೆತಂತಾಗಿದೆ.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ 2 ಬಾರಿ ಆಯ್ಕೆಯಾಗಿರುವ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಈ ಬಾರಿ ಮಂತ್ರಿ ಸ್ಥಾನ ಸಿಗಲಿದೆ ಎಂದು ಹೇಳಲಾಗಿತ್ತು. ಅಲ್ಲದೆ ಬಿ.ಎಸ್ ಯಡಿಯೂರಪ್ಪ ಅವರು ಕೂಡ ಶೋಭಾ ಕರಂದ್ಲಾಜೆ ಅವರಿಗೆ ಮಂತ್ರಿ ಸ್ಥಾನಕ್ಕಾಗಿ ಲಾಬಿ ಮಾಡಿದ್ದರು ಎಂದು ಹೇಳಲಾಗಿತ್ತು.

ಈಗ ಕೇಂದ್ರ ಮಂತ್ರಿ ಸ್ಥಾನ ಸಿಗದೇ ಇದ್ದರೂ ಈಗ ಕರಂದ್ಲಾಜೆ ಅವರಿಗೆ ಲೋಕಸಭೆಯ ಆಡಳಿತ ಪಕ್ಷದ ಮುಖ್ಯ ಸಚೇತಕಿ ಹುದ್ದೆಯನ್ನು ನೀಡುವ ಮೂಲಕ ಬಿಎಸ್‍ವೈ ಮನವಿಯನ್ನು ಮೋದಿ ಪುರಸ್ಕರಿಸಿದ್ದಾರೆ.

Facebook Comments

comments