ಬೆಂಗಳೂರಿನಲ್ಲಿ ಜನ ಕನ್ನಡವೇ ಮಾತನಾಡಲ್ಲ – ಶೋಭಾ ಕರಂದ್ಲಾಜೆ

ಉಡುಪಿ ಜೂನ್ 3: ಕೇಂದ್ರ ಸರಕಾರ ದಕ್ಷಿಣದ ರಾಜ್ಯಗಳ ಮೇಲೆ ಹಿಂದಿ ಭಾಷೆ ಹೇರಿಕೆ ಮಾಡುತ್ತಿದೆ ಎಂದು ಆರೋಪಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಕ್ರೋಶಕ್ಕೆ ಸಂಸದೆ ಶೋಬಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ. ಮೊದಲು ರಾಜ್ಯದಲ್ಲಿ ಕನ್ನಡ ಕಲಿಕೆ ಕಡ್ಡಾಯ ಮಾಡಲಿ ಎಂದು ಆಗ್ರಹಿಸಿದ್ದಾರೆ.

ಕೇಂದ್ರ ಸರಕಾರ ದಕ್ಷಿಣಭಾರತದ ರಾಜ್ಯಗಳಲ್ಲಿ ಹಿಂದಿ ಹೇರಿಕೆಗೆ ಹೊರಟಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟರ್ ನಲ್ಲಿ ಕೇಂದ್ರ ಸರಕಾರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ತಿರುಗೇಟು ನೀಡಿ ಸಂಸದೆ ಶೋಭಾ ಕರಂದ್ಲಾಜೆ ಹಿಂದಿ ಹೇರಿಕೆ ಬಗ್ಗೆ ಬಗ್ಗೆ ಯಾರೂ ಆಕ್ರೋಶ ವ್ಯಕ್ತ ಪಡಿಸುವ ಅಗತ್ಯ ಇಲ್ಲ, ರಾಜ್ಯ ಸರಕಾರ ಮೊದಲು ಕನ್ನಡಕ್ಕೆ ಆದ್ಯತೆ ಕೊಡಲಿ , ಬೆಂಗಳೂರಲ್ಲಿ ಜನ ಕನ್ನಡವೇ ಮಾತಾಡಲ್ಲ, ಕೇವಲ ಹಿಂದಿ ಹೇರಿಕೆ ಮಾಡ್ತಾರೆ ಅಂದಕೂಡ್ಲೇ ಕನ್ನಡದ ಅಭಿವೃದ್ದಿ ಆಗಲ್ಲ, ಎಲ್ಲಾ ಭಾಷೆಗಳನ್ನು ನಾವು ಕಲಿಯಬೇಕು, ಭಾಷೆ ಕಲಿಯಲು ವಿರೋಧ ಬೇಡ ಎಂದು ಹೇಳಿದರು.

ನಾನು ದೆಹಲಿಗೆ ಹೋಗಿ ಕನ್ನಡದಲ್ಲಿ ಮಾತಾಡಿದ್ರೆ ಅಧಿಕಾರಿಗಳಿಗೆ ಅರ್ಥ ಆಗಲ್ಲ, ಲೋಕಸಭೆಯಲ್ಲಿ ಕನ್ನಡ ಮಾತಾಡಿದ್ರೆ ಬೆರೆಯವರಿಗೆ ಅರ್ಥ ಆಗಲ್ಲ. ದಕ್ಷಿಣ ಭಾರತೀಯರು ಉತ್ತರದವರಿಗೂ ಅರ್ಥ ಆಗುವ ಭಾಷೆ ಕಲಿಯಬೇಕು. ಇದನ್ನು ಯಾರು ಬೇಕಾದರೂ ವಿರೋಧಿಸಲಿ, ಆದರೆ ಎಲ್ಲಾ ಭಾಷೆ ಕಲಿಯೋಣ,ಅದರಲ್ಲಿ ಕನ್ನಡಕ್ಕೆ ಆದ್ಯತೆ ಕೊಡೋಣ ಎಂದು ಹೇಳಿದರು.

ಕನ್ನಡ ಸಂಸ್ಕೃತಿ ಇಲಾಖೆಗೆ ಕೊಟ್ಟ ಹಣ ಕೇವಲ ಅಮೇರಿಕಾಗೆ ಹೋಗಲು ಖರ್ಚು ಮಾಡಿದ್ದು ಮಾತ್ರ ಎಂದು ಆರೋಪಿಸಿದರು.

13 Shares

Facebook Comments

comments