Connect with us

    LATEST NEWS

    ಸಚಿವೆಯಾಗುತಿದ್ದಂತೆ ತಮ್ಮ ಎಲ್ಲಾ ಹಳೆಯ ಟ್ವೀಟ್ ಗಳನ್ನು ಡಿಲೀಟ್ ಮಾಡಿದ ಸಂಸದೆ ಶೋಭಾ ಕರಂದ್ಲಾಜೆ…!!

    ಮಂಗಳೂರು ಜುಲೈ 8: ಕೇಂದ್ರ ಸಚಿವೆಯಾಗಿ ಪ್ರಮಾಣ ವಚನ ಸ್ವಿಕರೀಸುತ್ತಿದ್ದಂತೆ ಸಂಸದೆ ಶೋಭಾ ಕರಂದ್ಲಾಜೆ ತಮ್ಮ ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿದ್ದ ಎಲ್ಲಾ ಟ್ವೀಟ್ ಗಳನ್ನು ಅಳಿಸಿ ಹಾಕಿದ್ದಾರೆ.


    ಟ್ವಿಟರ್‌ನಲ್ಲಿ ಶೋಭಾ ಅವರ ಖಾತೆಯನ್ನು ಪ್ರಸ್ತುತ 2.79 ಲಕ್ಷಕ್ಕೂ ಹೆಚ್ಚು ಜನರು ಹಿಂಬಾಲಿಸುತ್ತಿದ್ದಾರೆ. ಶೋಭಾ ಕರಂದ್ಲಾಜೆ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ವಿರೋಧ ಪಕ್ಷಗಳ ಕಾಲೆಳೆಯುವ ರೀತಿಯಲ್ಲಿ ಹಲವಾರು ಟ್ವೀಟ್ ಗಳನ್ನು ಮಾಡಿದ್ದರು, ಕೆಲವೊಂದು ವಿವಾದಾತ್ಮಕ ಟ್ವೀಟ್ ಗಳನ್ನು ಮಾಡಿ ಸುದ್ದಿಯಲ್ಲಿದ್ದರು. ಅವರಿವರ ಬಗೆಗಿನ ವಿರೋಧಗಳು, ಸರ್ಕಾರದ ಸಮರ್ಥನೆಗಳು, ಘಟನೆಗಳ ವಿಶ್ಲೇಷಣೆಗಳು, ಕೋಮು–ಸೌಹಾರ್ದದ ವಿವರಗಳು,…ಯಾವೊಂದರ ಹಳೆಯ ಟ್ವೀಟ್‌ಗಳು ಈಗ ಅವರ ಖಾತೆಯಲ್ಲಿ ಕಾಣುತ್ತಿಲ್ಲ.


    ಈಗ ಕೇಂದ್ರ ಸಚಿವೆ ಸ್ಥಾನ ಸಿಗುತ್ತಿದ್ದಂತೆ ತಮ್ಮ ಹಿಂದಿನ ಟ್ವೀಟ್ ಗಳಿಂದ ಯಾವುದೇ ವಿವಾದವಾಗದಂತೆ ಎಚ್ಚರಿಕೆ ವಹಿಸಿರುವ ಸಂಸದೆ ಶೋಭಾ ಅವರು ತಮ್ಮ ಹಳೆಯ ಎಲ್ಲಾ ಟ್ವೀಟ್ ಗಳನ್ನು ಡಿಲಿಟ್ ಮಾಡಿದ್ದಾರೆ.
    ತಮ್ಮ ಹಳೆಯ ಟ್ವೀಟ್ ಗಳನ್ನು ಡಿಲಿಟ್ ಮಾಡುತ್ತಿದಂತೆ ಸಾಮಾಜಿಕ ಜಾಲತಾಣದಲ್ಲಿ ಹಲವರು ಟೀಕೆಗಳ ಸುರಿಮಳೆ ಹರಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply