Connect with us

    LATEST NEWS

    ಶಿವಣ್ಣನನ್ನೇ ಹಿಂದಿಕ್ಕಿದ ಶಿವಣ್ಣನ ಅಭಿಮಾನಿ ವೈರಲ್ ಸ್ಟಾರ್ ಕಾಫಿನಾಡು ಚಂದು!

    ಬೆಂಗಳೂರು, ಜುಲೈ 24: ಕನ್ನಡ ಚಿತ್ರರಂಗದಲ್ಲಿ 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಎನರ್ಜಿಟಿಕ್ ಹೀರೋ ಶಿವಣ್ಣಗೆ ಸೋಷಿಯಲ್ ಮೀಡಿಯಾ ಸ್ಟಾರ್ ಕಾಫಿನಾಡು ಚಂದು ಸೆಡ್ಡು ಹೊಡೆದಿದ್ದಾರೆ.

    ಹ್ಯಾಪಿ ಬರ್ತಡೇ ಸಾಂಗ್ ಹೇಳುವ ಮೂಲಕ ವೈರಲ್ ಆಗಿರುವ ಚಂದು, ಇನ್‌ಸ್ಟಾಗ್ರಾಮ್‌ನಲ್ಲಿ ಶಿವಣ್ಣನನ್ನೇ ಮೀರಿಸಿ, ಅಧಿಕ ಫಾಲೋವರ್ಸ್ ಗಿಟ್ಟಿಸಿಕೊಂಡಿದ್ದಾರೆ. ಪ್ರತಿ ವಿಡಿಯೋದಲ್ಲೂ ನಾನು ಶಿವಣ್ಣನ ಅಭಿಮಾನಿ ಎಂದ್ಹೇಳಿ ಬರ್ತಡೇ ಸಾಂಗ್ ಹೇಳುವ ಕಾಫಿನಾಡು ಚಂದು, ಇನ್‌ಸ್ಟಾಗ್ರಾಮ್‌ನಲ್ಲಿ ಶಿವಣ್ಣರಿಗಿಂತ ಅಧಿಕ ಫಾಲೋವರ್ಸ್ ಗಿಟ್ಟಿಸಿಕೊಂಡಿದ್ದಾರೆ.

    ಈ ಕಾಫಿನಾಡು ಚಂದು ಸದ್ಯ ಸೋಷಿಯಲ್ ಮೀಡಿಯಾ ಸ್ಟಾರ್. ನೀವು ಎಲ್ಲೇ ನೋಡಿದರೂ ಇವರದ್ದೇ ದರ್ಬಾರ್, ನೀವು ಯಾವುದೇ ಮೀಮ್ ಪೇಜ್, ಟ್ರೋಲ್ ಪೇಜ್‌ಗಳನ್ನು ನೋಡಿದರೆ ಸಾಕು ಎಲ್ಲೆಡೆ ಇದೇ ಹೆಸರು ಕೇಳಿ ಬರುತ್ತದೆ.

    ಶಿವರಾಜ್‌ಕುಮಾರ್‌ಗೆ 2 ಲಕ್ಷದ 5 ಸಾವಿರ ಫಾಲೋವರ್ಸ್ ಇದ್ರೆ, ಕಾಫಿನಾಡು ಚಂದು 2 ಲಕ್ಷದ 28 ಸಾವಿರ ಫಾಲೋವರ್ಸ್ ಹೊಂದುವ ಮೂಲಕ ಶಿವಣ್ಣನನ್ನೇ ಸೆಡ್ಡು ಹೊಡೆದಿದ್ದಾರೆ. ಮನಸ್ಸಿಗೆ ಬಂದಂತೆ ಹಾಡು, ಸಾಹಿತ್ಯ ಹೇಳಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದವರು ಈ ಚಂದು. ಸದ್ಯ ತಮ್ಮ ಹಾಡಿನ ವಿಡಿಯೋ ಮೂಲಕ ಭರ್ಜರಿ ವೀವ್ಸ್ ಗಿಟ್ಟಿಸಿಕೊಂಡು ವೈರಲ್ ಆಗ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply