Connect with us

    LATEST NEWS

    ಶಿರೂರು ಲಾರಿ ಬೈಕ್ ಡಿಕ್ಕಿ ಯುವಕ ಸ್ಥಳದಲ್ಲೆ ಸಾವು

    ಶಿರೂರು ಲಾರಿ ಬೈಕ್ ಡಿಕ್ಕಿ ಯುವಕ ಸ್ಥಳದಲ್ಲೆ ಸಾವು

    ಉಡುಪಿ ಅಕ್ಟೋಬರ್ 25: ಶಿರೂರು ಚೆಕ್ ಪೋಸ್ಟ್ ಬಳಿ ಲಾರಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಯುವಕ ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ನಡೆದಿದೆ.

    ಮೃತ ಯುವಕನನ್ನು ಶಿರೂರು ಕೆಳಪೇಟೆಯ ನಿವಾಸಿ ಸುಭಾಶ್ ಎಂದು ಗುರುತಿಸಲಾಗಿದೆ. ಈತ ಬೆಂಗಳೂರಿನಲ್ಲಿದ್ದು ಕಾರ್ಯಕ್ರಮದ ಪ್ರಯುಕ್ತ ಊರಿಗೆ ಬಂದಿದ್ದ. ಮಾರ್ಕೆಟ್ ಬೀಡಾ ಅಂಗಡಿಯಲ್ಲಿ ಟೀ ಕುಡಿದು ವಾಪಾಸ್ಸು ಹೋಗುವ ವೇಳೆ ಈ ಘಟನೆ ನಡೆದಿದೆ. ಇನ್ನೊಬ್ಬ ಸವಾರ ಚಂದ್ರ ಕಾಲಿಗೆ ಬಲವಾದ ಪೆಟ್ಟು ಬಿದ್ದಿದ್ದು ಆಸ್ಪತ್ರೆಗೆ ಸಾಗಿಸಲಾಗಿದೆ.

    ಮೊನ್ನೆಯಷ್ಟೆ ಇದೆ ಸ್ಥಳದಲ್ಲಿ ಅಪಘಾತ ನಡೆದಿದ್ದು ಬೈಕ್ ಸವಾರರಿಬ್ಬರು ಗಂಭೀರ ಗಾಯಗೊಂಡಿದ್ದಾರು. ರಸ್ತೆ ಅವ್ಯವಸ್ಥೆ ಸತತ ಅಪಘಾತಗಳಿಗೆ ಕಾರಣವಾಗಿದೆ ಅನ್ನೋದು ಸಾರ್ವಜನಿಕರ ಅಭಿಪ್ರಾಯ. ಬೈಂದೂರು ಪೋಲಿಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಲಾರಿ ಚಾಲಕನನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply