LATEST NEWS
ಶಿರಾಡಿ ಘಾಟ್ – 1976 ಕೋಟಿ ಮೊತ್ತದ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಬಿಡ್
ಮಂಗಳೂರು ಜನವರಿ 03 : ಶಿರಾಡಿ ಘಾಟ್ ರಸ್ತೆ ವಿಚಾರಕ್ಕೆ ಇದೀಗ ಕೇಂದ್ರ ಸರಕಾರ ಚತುಷ್ಪಥ ರಸ್ತೆ ನಿರ್ಮಾಣ ಮಾಡಲು ಹೊರಟಿದ್ದು, ಮಾರನಹಳ್ಳಿ ಅಡ್ಡಹೊಳೆ ನಡುವೆ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಸುಮಾರು 1976 ಕೋಟಿ ಮೊತ್ತದ ಬಿಡ್‌ನ್ನು ಆಹ್ವಾನಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್‌ಗೆ ಬರೆದ ಪತ್ರದಲ್ಲಿ ಕೇಂದ್ರ ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಈ ಚತುಷ್ಪಥ ಕಾಮಗಾರಿ ಜೊತೆಗೆ ಮಂಗಳೂರು- ಬೆಂಗಳೂರು ನಡುವಿನ ಸಂಚಾರಕ್ಕೆ ಲಾಜಿಸ್ಟಿಕ್ ವೆಚ್ಚವನ್ನು ಕಡಿಮೆ ಮಾಡಲಿರುವ ಶಿರಾಡಿ ಘಾಟ್ ಟನಲ್ ಯೋಜನೆಯನ್ನು 15,000 ಕೋಟಿ ವೆಚ್ಚದಲ್ಲಿ 23 ಕಿ.ಮೀ. ಸುರಂಗ ಮಾರ್ಗ ನಿರ್ಮಾಣ ಕಾಮಗಾರಿಗೆ ಏಪ್ರಿಲ್, 2023 ರೊಳಗೆ ಡಿಪಿಆರ್ ಅನ್ನು ಅಂತಿಮಗೊಳಿಸಿ ಮತ್ತು ಮೇ, 2023 ರಲ್ಲಿ ಬಿಡ್‌ಗಳನ್ನು ಆಹ್ವಾನಿಸುವುದಾಗಿ ತಿಳಿಸಿದ್ದಾರೆ.
ಅಲ್ಲದೇ ಸಕಲೇಶಪುರದಿಂದ ಮಾರನಹಳ್ಳಿಯ ಭಾಗದ ರಸ್ತೆಯಲ್ಲಿ ಸುಗಮ ಸಂಚಾರಕ್ಕಾಗಿ ಕೂಡಲೇ ದುರಸ್ತಿ ಮಾಡಲು ನಿರ್ಧರಿಸಲಾಗಿದ್ದು, ದುರಸ್ತಿ ಕಾಮಗಾರಿಗೆ 12.20 ಕೋಟಿ ಬಿಡ್‌ನ ಮೌಲ್ಯಮಾಪನ ಮಾಡಲಾಗುತ್ತಿದೆ. ಅಲ್ಲದೇ ಅಸ್ತಿತ್ವದಲ್ಲಿರುವ ರಸ್ತೆ ನಿರ್ವಹಣೆಗೆ ಗುತ್ತಿಗೆದಾರರು ಪ್ಯಾಚ್ ವರ್ಕ್ ದುರಸ್ತಿಗೆ ಮುಂದಾಗಿದ್ದಾರೆ ಎಂದು ಗಡ್ಕರಿ, ನಳಿನ್ ಕುಮಾರ್ ಕಟೀಲ್‌ಗೆ ಬರೆದ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
You must be logged in to post a comment Login