Connect with us

LATEST NEWS

ಮಂಗಳೂರು – ಆಳ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಅವಘಢ – 2 ಸಾವು 12 ಮಂದಿ ನಾಪತ್ತೆ

ಮಂಗಳೂರು ಎಪ್ರಿಲ್ 13:ಮಂಗಳೂರು ಸಮೀಪ ಆಳ ಸಮುದ್ರದಲ್ಲಿ ಮೀನುಗಾರಿಕಾ ಬೋಟ್ ಒಂದು ದುರಂತಕ್ಕೀಡಾಗಿದ್ದು, ಮೀನುಗಾರಿಕಾ ಬೋಟ್ ನಲ್ಲಿದ್ದ ಇಬ್ಬರು ಸಾವನಪ್ಪಿದ್ದು, 12 ಮಂದಿ ಕಣ್ಮರೆಯಾಗಿದ್ದಾರೆ.

ಸಾಂದರ್ಭಿಕ ಚಿತ್j

ಮಂಗಳೂರು ಬಂದರಿನಿಂದ 43 ನಾಟೆಕಲ್‌‌ ಮೈಲ್‌ ದೂರದಲ್ಲಿ ಈ ಘಟನೆ ನಡೆದಿದೆ. ರಬ್ಬಾ ಎಂಬ ಹೆಸರಿನ ಮೀನುಗಾರಿಕಾ ಬೋಟ್ ಗೆ ಹಡಗೊಂದು ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ತಮಿಳುನಾಡು ಹಾಗೂ ಬಂಗಾಳ ಮೂಲದ ಕಾರ್ಮಿಕರಿದ್ದ ಮೀನುಗಾರಿಕಾ ಬೋಟ್‌ ಕೇರಳದ ಕೋಝಿಕ್ಕೋಡ್‌‌ ಜಿಲ್ಲೆಯ ಬೇಪೋರ್‌‌ನಿಂದ ಹೊರಟಿತ್ತು.

ಅಪಘಾತದ ಪರಿಣಾಮ ಇಬ್ಬರು ಮೀನುಗಾರರು ಸಾವನ್ನಪ್ಪಿದ್ದು, 12 ಮಂದಿ ನಾಪತ್ತೆಯಾಗಿದ್ದಾರೆ. ಇಂಡಿಯನ್‌‌ ಕೋಸ್ಟ್‌ ಗಾರ್ಡ್‌ನ ಮೂರು ಹಡಗು ಹಾಗೂ ಏರ್‌‌‌ ಕ್ರಾಫ್ಟ್‌ ಮೂಲಕ ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದು, ನಾಪತ್ತೆಯಾದವರಿಗೆ ಶೋಧ ಕಾರ್ಯ ಮುಂದುವರೆದಿದೆ. ಘಟನೆಯ ಬಗ್ಗೆ ಭಾರತೀಯ ಕೋಸ್ಟ್‌ ಗಾರ್ಡ್‌‌ ಟ್ವಿಟ್ಟರ್‌‌ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ.