Connect with us

    KARNATAKA

    ಶಿವಮೊಗ್ಗ ಕರ್ಫ್ಯೂ ನಡುವೆ ಮೂರು ವಾಹನಗಳಿಗೆ ಕಿಡಿಗೇಡಿಗಳಿಂದ ಬೆಂಕಿ

    ಶಿವಮೊಗ್ಗ ಫೆಬ್ರವರಿ 22:ಭಜರಂಗದಳದ ಕಾರ್ಯಕರ್ತ ಹರ್ಷ ಕೊಲೆಯಾದ ಬಳಿಕ ಉದ್ವಿಗ್ನ ಸ್ಥಿತಿಯಲ್ಲಿರುವ ಶಿವಮೊಗ್ಗ ಜಿಲ್ಲೆಯಲ್ಲಿ ಕರ್ಫ್ಯೂ ನಡುವೆ ಇಂದು ಮತ್ತೆ ಮೂರು ವಾಹನಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.


    ಗೋಪಾಳದ ಕೊರಮ ಕೇರಿ ಮತ್ತು ಟಿಪ್ಪುನಗರದ 6ನೇ ತಿರುವಿನಲ್ಲಿ ಕಿಡಿಗೇಡಿಗಳು ಎರಡು ಆಟೋ ರಿಕ್ಷಾ, ಒಂದು ದ್ವಿಚಕ್ರವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.

    ಕೊರಮರ ಕೇರಿಯಲ್ಲಿ ಗೊಬ್ಬರ ಇಳಿಸುವ ಕೆಲಸ ಮಾಡಿಕೊಂಡಿದ್ದವರಿಗೆ ಸೇರಿದ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದೆ. ಮಂಗಳವಾರ ಬೆಳಗ್ಗಿನ ಜಾವ 5:30ರ ವೇಳೆಗೆ ಈ ದುಷ್ಕೃತ್ಯ ಎಸಗಲಾಗಿದೆ ಎಂದು ತಿಳಿದುಬಂದಿದೆ.
    ಅಲ್ಲದೇ ಮೇಲಿನ ತುಂಗಾನಗರದಲ್ಲಿ ಆಟೋ ರಿಕ್ಷಾಗಳಿಗೂ ಬೆಂಕಿ‌ಹಚ್ಚಿದ್ದಾರೆ. ಇದರಿಂದ ಆಟೋ ಸುಟ್ಟು ಕರಕಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply