ಒಂದೂವರೆ ವರ್ಷದಿಂದ ಪ್ರೀತಿಯಲ್ಲಿ ಬಿದಿದ್ದ ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಶಿಖರ್ ಧವನ್ ತಮ್ಮ ಪ್ರೇಯಸಿ ಐರಿಶ್ ಮೂಲದ ಸೋಫಿ ಶೈನ್ ಅವರೊಂದಿಗೆ ಫೆಬ್ರವರಿ. 21 ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಶಿಖರ್ ಮತ್ತು ಸೋಫಿ ಅವರ ವಿವಾಹದಲ್ಲಿ ಅವರ ಕುಟುಂಬಗಳು ಮತ್ತು ಆಪ್ತರು ಮಾತ್ರ ಭಾಗವಹಿಸಿದ್ದರು. ಪ್ರೇಯಸಿ ಸೋಫಿ ಶೈನ್ ಜೊತೆ ಒಂದೂವರೆ ವರ್ಷದಿಂದ ಪ್ರೀತಿಯಲ್ಲಿ ಬಿದಿದ್ದ ಧವನ್, ಕಳೆದ ತಿಂಗಳು ನಿಶ್ಚಿತಾರ್ಥ ಮಾಡಿಕೊಂಡಿದ್ದು ಶನಿವಾರ ಸಪ್ತಪದಿ ತುಳಿದಿದ್ದಾರೆ.
ವಿವಾಹವು ಅದ್ದೂರಿಯಾಗಿ ನಡೆದಿದ್ದು, ಯಜುವೇಂದ್ರ ಚಹಾಲ್ ಸೇರಿದಂತೆ ಆಪ್ತರು ಪಾಲ್ಗೊಂಡಿದ್ದರು. ಈ ಸಂಭ್ರಮದಲ್ಲಿ ಜೋಡಿಗಳು ಮಿಂದೆದ್ದಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದ್ದವು.
2012 ರಲ್ಲಿ ಆಯೇಷಾ ಮುಖರ್ಜಿ ಅವರನ್ನು ಮದುವೆಯಾಗಿದ್ದ ಧವನ್ ಅವರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಿತ್ತು. ಹೀಗಾಗಿ ದಂಪತಿಗಳಿಬ್ಬರು 2023 ರಲ್ಲಿ ವಿಚ್ಛೇದನ ಪಡೆದಿದ್ದರು.
2024 ರ ಆಗಸ್ಟ್ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದ ಧವನ್, ಪ್ರಸ್ತುತ ಉದ್ಯಮ ಮತ್ತು ವೈಯಕ್ತಿಕ ಜೀವನದ ಮೇಲೆ ಗಮನ ಹರಿಸಿದ್ದಾರೆ