Connect with us

LATEST NEWS

ಕದ್ರಿ ಮೈದಾನದ ಕಾಂಗ್ರೇಸ್ ಸಭೆಯಲ್ಲಿ ಖಾಲಿ ಖುರ್ಚಿ ಸಭೆಗೆ ಬರದೆ ಹಿಂದಿರುಗಿದ ಶತ್ರುಘ್ನ ಸಿನ್ಹಾ

ಕದ್ರಿ ಮೈದಾನದ ಕಾಂಗ್ರೇಸ್ ಸಭೆಯಲ್ಲಿ ಖಾಲಿ ಖುರ್ಚಿ ಸಭೆಗೆ ಬರದೆ ಹಿಂದಿರುಗಿದ ಶತ್ರುಘ್ನ ಸಿನ್ಹಾ

ಮಂಗಳೂರು ಎಪ್ರಿಲ್ 14: ಬಿಜೆಪಿಯಿಂದ ಹೊರಗೆ ಬಂದು ಇತ್ತೀಚೆಗಷ್ಟೇ ಕಾಂಗ್ರೇಸ್ ಸೇರಿದ್ದ ಬಾಲಿವುಡ್ ಸ್ಟಾರ್ ಶತ್ರುಘ್ನ ಸಿನ್ಹಾ ಅವರು ಭಾಗವಹಿಸಬೇಕಾಗಿದ್ದ ಕಾಂಗ್ರೇಸ್ ಸಮಾವೇಶ ಜನರಿಲ್ಲದೇ ಪ್ಲಾಪ್ ಶೋ ಆಗಿದೆ.

ಮಂಗಳೂರಿನ ಕದ್ರಿ ಮೈದಾನದಲ್ಲಿ ಇಂದು ಸಂಜೆ 6.30 ಕಾರ್ಯಕ್ರಮಕ್ಕೆ ನಿಗದಿಯಾಗಿತ್ತು. ಕಾಂಗ್ರೇಸ್ ಸ್ಟಾರ್ ಪ್ರಚಾರಕರಾಗಿರುವ ಶತ್ರುಘ್ನ ಸಿನ್ಹಾ ಕದ್ರಿ ಮೈದಾನದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೇಸ್ ಸಭೆಯಲ್ಲಿ ಭಾಗವಹಿಸಬೇಕಾಗಿತ್ತು. ಕದ್ರಿ ಕಾರ್ಯಕ್ರಮದ ಬಳಿಕ ಮುಡಿಪು ಕಾಂಗ್ರೇಸ್ ಸಭೆಗೆ ತೆರಳಬೇಕಾಗಿತ್ತು.

ಆದರೆ ಕದ್ರಿಯಲ್ಲಿ ಕಾರ್ಯಕರ್ತರ ಸಂಖ್ಯೆ ವಿರಳ ಇದ್ದಿದ್ದನ್ನು ಮನಗಂಡ ಸಚಿವ ಯು. ಟಿ ಖಾದರ್ ವಿಮಾನ ನಿಲ್ದಾಣದಿಂದ ನೇರವಾಗಿ ಮುಡಿಪುವಿಗೆ ಶತ್ರುಘ್ನ ಸಿನ್ಹಾ ಅವರನ್ನು ಕರೆದೊಯ್ದಿದ್ದರು. ಮುಡಿಪು ಕಾರ್ಯಕ್ರಮದ ಬಳಿಕ ಕದ್ರಿ ಮೈದಾನಕ್ಕೆ ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿದ್ದ ಶತ್ರುಘ್ನ ಸಿನ್ಹಾ ಕದ್ರಿ ಮೈದಾನದಲ್ಲಿ ಸಭಿಕರಿಗಿಂತ ಜಾಸ್ತಿ ಖಾಲಿ ಕುರ್ಚಿಗಳೇ ಗಮನಸೆಳೆಯುತ್ತಿದ್ದವು..! ಕಾರ್ಯಕ್ರಮ ಆರಂಭವಾಗಿ ಜಿಲ್ಲಾ ನಾಯಕರ ಮಾತಿಗಷ್ಟೇ ಸೀಮಿತವಾಯಿತು‌.

ಇನ್ನು ಮೈತ್ರಿ ಅಭ್ಯರ್ಥಿ ಮಿಥುನ್ ರೈ ಪರ ಪ್ರಚಾರಕ್ಕೆ ಬರಬೇಕಿದ್ದ ಶತ್ರುಘ್ನ ಸಿನ್ಹಾ ಬರುತ್ತಿಲ್ಲ, ಅದಕ್ಕಾಗಿ ಅವರು ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಐವನ್ ಡಿಸೋಜಾ ಸಭೆಗೆ ತಿಳಿಸಿದರು. ಕದ್ರಿ ಮೈದಾನದಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ನಾಯಕರ ಮಾತು ಕೇಳಲು ಸಿದ್ದರಿಲ್ಲದೇ ಸಭಿಕರು ಮನೆಗೆ ವಾಪಾಸಾಗುತ್ತಿದ್ದು ಕಂಡು ಬಂತು.

Facebook Comments

comments