Connect with us

LATEST NEWS

ಶೇರಿಂಗ್ ಅಲ್ಲಿ ಖರೀದಿ ಮಾಡಿದ ಲಾಟರಿ ಬಂತು 12 ಕೋಟಿ ಬಂಪರ್ ಬಹುಮಾನ

ಶೇರಿಂಗ್ ಅಲ್ಲಿ ಖರೀದಿ ಮಾಡಿದ ಲಾಟರಿ ಬಂತು 12 ಕೋಟಿ ಬಂಪರ್ ಬಹುಮಾನ

ಕಾಸರಗೋಡು ಸೆಪ್ಟೆಂಬರ್ 20: ಶೆರಿಂಗ್ ನಲ್ಲಿ ಖರೀದಿಸಿದ ಲಾಟರಿ ಗೆ ಬರೋಬ್ಬರಿ 12 ಕೋಟಿ ಬಹುಮಾನ ಕೊಲ್ಲಂ ಜಿಲ್ಲೆಯ ಕರುನಾಗಪಳ್ಳಿಯ ಜ್ಯುವೆಲ್ಲರಿಯೊಂದರ ಆರು ಮಂದಿ ಸಿಬಂದಿಗೆ ಬಂದಿದೆ.

ಕೇರಳ ಸರಕಾರ ಓಣಂ ವಿಶೇಷ ಲಾಟರಿ ಟಿಕೇಟ್ ನ್ನು ಆರು ಮಂದಿ ಸ್ನೇಹಿತರು ತಲಾ 50 ರೂ ಗಳಂತೆ ವಂತಿಗೆ ಒಟ್ಟುಗೂಡಿಸಿ 300 ರೂ. ಬೆಲೆಯ ಒಂದು ಲಾಟರಿಯನ್ನು ಖರೀದಿ ಮಾಡಿದ್ದರು.

ಬೇಕೋ ಬೇಡವೋ ಎಂಬಂತೆ ವಂತಿಗೆ ಕೂಡಿಸಿ ಟಿಕೆಟ್‌ ಖರೀದಿಸಿದವರಿಗೆ ಈಗ ಬಂಪರ್‌ ಬಹುಮಾನವೇ ಒಲಿದಿದೆ. ಕರುನಾಗಪಳ್ಳಿಯ ಚುಂಗತ್‌ ಜುವೆಲರಿಯ ಸಿಬಂದಿಯಾಗಿರುವ ರೋಣಿ, ವಿವೇಕ್‌, ರತೀಶ್‌, ಸುಬಿನ್‌, ರೆಂಜಿನ್‌, ರಾಜೀವ್‌ ಲಭಿಸಿದ್ದು 12 ಕೋಟಿ ರೂ! ಈ ಬಂಪರ್‌ ಬಹುಮಾನ ಟಿ.ಎಂ. 160869 ಸಂಖ್ಯೆಯ ಟಿಕೆಟ್‌ಗೆ ಒಲಿದಿದೆ. ಕಾಯಂಕುಳಂ ಶ್ರೀ ಮುರುಗ ಲಾಟರಿ ಏಜೆನ್ಸಿಯ ಶಿವನ್‌ ಕುಟ್ಟಿ ಈ ಟಿಕೆಟ್‌ ಮಾರಾಟ ಮಾಡಿದ್ದರು.

ವಿಜೇತರಾದ ಆರು ಮಂದಿಗೆ ಒಟ್ಟು ತೆರಿಗೆ ಕಳೆದು 7.56 ಕೋಟಿ ರೂಪಾಯಿ ಸಿಗಲಿದ್ದು, ಪ್ರತಿಯೊಬ್ಬರಿಗೆ ಸುಮಾರು ಒಂದೂಕಾಲು ಕೋಟಿ ರೂಪಾಯಿ ಸಿಗಲಿದೆ. ಅಲ್ಲದೆ ಟಿಕೆಟ್‌ ಮಾರಾಟ ಮಾಡಿದ ಶಿವನ್‌ ಕುಟ್ಟಿಗೆ 1.20 ಕೋಟಿ ರೂಪಾಯಿ ಕಮಿಷನ್‌ ಲಭಿಸಲಿದೆ.

Facebook Comments

comments