ಅರ್ಜುನ್ ರೆಡ್ಡಿ ಸಿನೆಮಾ ಮೂಲಕ ಖ್ಯಾತಿ ಪಡೆದಿದ್ದ ನಟಿ ಶಾಲಿನಿ ಪಾಂಡೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪೋಟೋಗಳ ಮೂಲಕ ಟ್ರೆಂಡಿಂಗ್ ನಲ್ಲಿದ್ದಾರೆ. ಅರ್ಜುನ್ ರೆಡ್ಡಿ ಚಿತ್ರದಲ್ಲಿ ಮುಗ್ದ ಪಾತ್ರದಲ್ಲಿ ನಟಿಸಿದ್ದ ನಟಿ, ನಿಜ ಜೀವನದಲ್ಲಿ ಸಖತ್ ಬೋಲ್ಡ್ ಆಗಿದ್ದಾರೆ.

ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶಾಲಿನಿ ಪಾಂಡೆ ಇತ್ತೀಚೆಗೆ ಹಂಚಿಕೊಂಡಿರುವ ಫೋಟೋಗಳು ಸಖತ್ ವೈರಲ್ ಆಗುತ್ತಿವೆ. ಈ ಫೋಟೋದಲ್ಲಿ ಶಾಲಿನಿ ಕೇವಲ ಟವಲ್ ಸುತ್ತಿಕೊಂಡು, ಬೆನ್ನು ತೋರಿಸಿ ಪೋಸ್ ನೀಡಿದ್ದಾರೆ. ಯಾವುದೇ ಅಬ್ಬರವಿಲ್ಲದೇ ಸರಳ ಮೇಕಪ್, ಬಿಟ್ಟ ಕೂದಲು ಹಾಗೂ ಮಂದ ಬೆಳಕಿನಲ್ಲಿ ಮೂಡಿಬಂದಿರುವ ಈ ಫೋಟೋಗಳು ಶಾಲಿನಿ ಅವರ ಆತ್ಮವಿಶ್ವಾಸವನ್ನು ಎತ್ತಿ ತೋರಿಸುತ್ತಿವೆ.

ತೆಲುಗಿನ ‘ಅರ್ಜುನ ರೆಡ್ಡಿ’ ಸಿನಿಮಾದ ಮೂಲಕ ದೊಡ್ಡ ಮಟ್ಟದ ಯಶಸ್ಸು ಕಂಡ ಶಾಲಿನಿ ಪಾಂಡೆ, ನಂತರ ಬಾಲಿವುಡ್ನತ್ತ ಮುಖ ಮಾಡಿದರು. ಇತ್ತೀಚೆಗಷ್ಟೇ ಅವರು ಪುಲ್ಕಿತ್ ಸಾಮ್ರಾಟ್ ಮತ್ತು ವರುಣ್ ಶರ್ಮಾ ನಟನೆಯ ‘ರಾಹು ಕೇತು’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾದಿಂದ ಸಿನಿಮಾಗೆ ವಿಭಿನ್ನ ಪಾತ್ರಗಳನ್ನು ಆರಿಸಿಕೊಳ್ಳುತ್ತಿರುವ ಶಾಲಿನಿ, ಈಗ ತಮ್ಮ ಈ ಬೋಲ್ಡ್ ಫೋಟೋಶೂಟ್ ಮೂಲಕ ತಾನು ಕೇವಲ ಸಾಂಪ್ರದಾಯಿಕ ಪಾತ್ರಗಳಿಗೆ ಮಾತ್ರ ಸೀಮಿತವಲ್ಲ ಎಂಬ ಸಂದೇಶ ನೀಡಿದ್ದಾರೆ.

ತೆರೆಯ ಮೇಲಿನ ಸರಳತೆ ಮತ್ತು ಆಫ್-ಸ್ಕ್ರೀನ್ನಲ್ಲಿನ ಈ ಬೋಲ್ಡ್ ಲುಕ್ ಎರಡನ್ನೂ ಶಾಲಿನಿ ಸಮಾನವಾಗಿ ನಿಭಾಯಿಸುತ್ತಿರುವುದು ಅವರ ವೃತ್ತಿಜೀವನದ ಹೊಸ ಆಯಾಮವನ್ನು ಸೂಚಿಸುತ್ತಿದೆ. ಇನ್ಸ್ಟಾಗ್ರಾಮ್ನಲ್ಲಿ ಶಾಲಿನಿ ಅವರನ್ನು 23 ಲಕ್ಷಕ್ಕೂ ಅಧಿಕ ಜನರು ಫಾಲೋ ಮಾಡುತ್ತಿದ್ದಾರೆ.