Connect with us

    LATEST NEWS

    ತಾಯಿ ಮಗನಿಗೆ ಕೊರೊನಾ ಸೊಂಕ ದೃಢ ಶಕ್ತಿನಗರದ ಕಕ್ಕೆಬೆಟ್ಟು ಸೀಲ್ ಡೌನ್

    ತಾಯಿ ಮಗನಿಗೆ ಕೊರೊನಾ ಸೊಂಕ ದೃಢ ಶಕ್ತಿನಗರದ ಕಕ್ಕೆಬೆಟ್ಟು ಸೀಲ್ ಡೌನ್

    ಮಂಗಳೂರು ಎಪ್ರಿಲ್ 27: ಇಂದು ಕೊರೊನಾ ದೃಢಪಟ್ಟ ಕೊರೊನಾ ಸೊಂಕಿತರ ನಿವಾಸದ ಸ್ಥಳ ಶಕ್ತಿನಗರದ ಕಕ್ಕೆಬೆಟ್ಟು ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದ್ದು, ಮನೆಯಿಂದ ಯಾರು ಹೊರಬರದಂತೆ ಎಚ್ಚರಿಕೆ ನೀಡಲಾಗಿದೆ.

    ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 80 ವರ್ಷದ ಮಹಿಳೆ ಹಾಗೂ ಆಕೆಯ 45೫ ವರ್ಷದ ಪುತ್ರನಲ್ಲಿ ಇಂದು ಕೊರೊನಾ ಸೋಂಕು ದೃಢ ಪಟ್ಟಿದೆ.

    ಈ ಹಿನ್ನಲೆ ಸೋಂಕಿತರ ವಾಸವಾಗಿದ್ದ ಮನೆಯಿಂದ ಸುಮಾರು 200 ಮೀ ವ್ಯಾಪ್ತಿಯನ್ನು ನಿಯಂತ್ರಿತ ವಲಯವಾಗಿ ಘೋಷಿಸಲಾಗಿದ್ದು, ಸುಮಾರು 22ಕ್ಕೂ ಅಧಿಕ ಮನೆಗಳ 120ಕ್ಕೂ ಅಧಿಕ ಮಂದಿಗೆ ಕ್ವಾರಂಟೈನ್ ಇರುತ್ತದೆ. ಸೀಲ್ ಡೌನ್ ವ್ಯಾಪ್ತಿಯಲ್ಲಿ 5 ಅಂಗಡಿ ಮುಂಗಟ್ಟುಗಳಿವೆ.

    ಕಕ್ಕೆಬೆಟ್ಟುವಿನ ಸುತ್ತಮುತ್ತಲಿನ 5 ಕೀ.ಮೀ ನ್ನು ಬಫರ್ ಝೋನ್ ಎಂದು ಘೋಷಿಸಲಾಗಿದೆ. ಈ ವ್ಯಾಪ್ತಿಯಲ್ಲಿ 4800 ಮನೆ, 1350 ಅಂಗಡಿ ಮುಂಗಟ್ಟು ಇದ್ದು 73,000 ಜನಸಂಖ್ಯೆ ಈ ವ್ಯಾಪ್ತಿಗೆ ಒಳಪಟ್ಟಿದ್ದಾರೆ. ಬಫರ್ ಝೋನ್ ವ್ಯಾಪ್ತಿಗೆ ಪೂರ್ವಕ್ಕೆ ವಾಮಂಜೂರು ಜಂಕ್ಷನ್, ಪಶ್ಚಿಮಕ್ಕೆ ಉರ್ವ ಮಾರ್ಕೇಟ್ ಉತ್ತರಕ್ಕೆ ಪದವಿನಂಗಡಿ, ದಕ್ಷಿಣಕ್ಕೆ ಬಂಟ್ಸ್ ಹಾಸ್ಟಲ್ ಜಂಕ್ಷನ್ ಒಳಪಡುತ್ತದೆ.

    Share Information
    Advertisement
    Click to comment

    You must be logged in to post a comment Login

    Leave a Reply