Connect with us

    LATEST NEWS

    ಶಬರಿಮಲೆ ತೀರ್ಥವನ್ನು ಹ್ಯಾಂಡ್ ಸ್ಯಾನಿಟೈಸರ್ ರೀತಿ ಬಳಸಿದ ಕೇರಳದ ದೇವಸ್ವಂ ಸಚಿವ ಕೆ. ರಾಧಾಕೃಷ್ಣನ್

    ಕೇರಳ : ಶಬರಿಮಲೆ ದೇವಸ್ಥಾನದಲ್ಲಿ ನೀಡಲಾದ ತೀರ್ಥ ಪ್ರಸಾದವನ್ನು ಹ್ಯಾಂಡ್ ಸ್ಯಾನಿಟೈಸರ್ ರೀತಿ ಬಳಸಿಕೊಂಡ ಕೇರಳದ ದೇವಸ್ವಂ ಸಚಿವ ಕೆ. ರಾಧಾಕೃಷ್ಣನ್ ಅವರ ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.


    ಎರಡು ತಿಂಗಳ ಮಂಡಳಂ-ಮಕರವಿಳಕ್ಕು ವಾರ್ಷಿಕ ಯಾತ್ರೆಗೆ ಶಬರಿಮಲೆ ದೇವಸ್ಥಾನ ತೆರೆಯಲಾಗಿದ್ದು, ಈ ಹಿನ್ನಲೆ ಭಕ್ತರನ್ನು ಸ್ವಾಗತಿಸಲು ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ದೇವಸ್ವಂ ಸಚಿವ ಕೆ. ರಾಧಾಕೃಷ್ಣನ್ ಭಾಗವಹಿಸಿದ್ದರು. ನಂತರ ಅಯ್ಯಪ್ಪ ದೇವಸ್ಥಾನದಲ್ಲಿ ದರ್ಶನಕ್ಕೆ ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಅನಂತಗೋಪನ್ ಮತ್ತು ಸ್ಥಳೀಯ ಶಾಸಕ ಪ್ರವೋದ್ ನಾರಾಯಣನ್ ಅವರೊಂದಿಗೆ ಸಚಿವರು ದೇವಸ್ಥಾನಕ್ಕೆ ಆಗಮಿಸಿದ್ದರು.

    ಪುರೋಹಿತರು ನೀಡಿದ ತೀರ್ಥ ಪ್ರಸಾದವನ್ನು ಸ್ವೀಕರಿಸಿದ ಸಚಿವರು ಹ್ಯಾಂಡ್ ಸ್ಯಾನಿಟೈಸರ್ ರೀತಿಯಲ್ಲಿ ಬಳಕೆ ಮಾಡಿರುವುದಾಗಿ ಆರೋಪಿಸಲಾಗಿದೆ. ಈ ಸಂಬಂಧ ಕೇರಳ ಸಚಿವರ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಟೀಕೆಗಳು ವ್ಯಕ್ತವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply