Connect with us

    BANTWAL

    ಅಪ್ರಾಪ್ತೆ ಬಾಲಕಿಗೆ ಲೈಂಗಿಕ ಕಿರುಕುಳ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿ ಬಂಧಿಸಿದ ಪೊಲೀಸರು

    ಅಪ್ರಾಪ್ತೆ ಬಾಲಕಿಗೆ ಲೈಂಗಿಕ ಕಿರುಕುಳ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿ ಬಂಧಿಸಿದ ಪೊಲೀಸರು

    ಬಂಟ್ವಾಳ ನವೆಂಬರ್ 21: ಅಪ್ರಾಪ್ತ ಶಾಲಾ ಬಾಲಕಿಯೋರ್ವಳಿಗೆ ಹಾಡುಹಗಲೇ ಸಾರ್ವಜನಿಕವಾಗಿ ಕಿಸ್ ನೀಡಿ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಬಂಟ್ವಾಳ ಪೊಲೀಸರು ಯಶಸ್ವಿಯಾಗಿದ್ದಾರೆ.

    ಬಂಧಿತ ಆರೋಪಿಯನ್ನು ಕಲ್ಲಡ್ಕ ಸಮೀಪದ ಬೊಳಂತೂರು ನಿವಾಸಿ ರಿಕ್ಷಾ ಚಾಲಕ ರಹೀಂ ಎಂದು ಗುರುತಿಸಲಾಗಿದೆ. ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ನೇತ್ರತ್ವದ ಪೊಲೀಸ್ ತಂಡ ಆರೋಪಿಯ ರಹಿಂ ನನ್ನು ಕಲ್ಲಡ್ಕದಲ್ಲಿ ಬಂಧಿಸಿದ್ದಾರೆ.

    ಕೋಮು ಸೂಕ್ಷ್ಮ ಪ್ರದೇಶದ ಕಲ್ಲಡ್ಕ ಪಂಚವಟಿ ವಾಣಿಜ್ಯ ಸಂಕೀರ್ಣದಲ್ಲಿ ಈ ಘಟನೆ ನಡೆದಿದೆ. ಶಾಲಾ ಬಾಲಕಿ ತನ್ನ ಸ್ನೇಹಿತೆಯ ಜೊತೆ ಶಾಲೆಗೆ ಹೋಗಲು ಕಾದು ಕುಳಿತಿದ್ದಳು. ಅದೇ ಸಮಯದಲ್ಲಿ ಇವಳು ಒಬ್ಬಳೇ ನಿಂತುಕೊಂಡಿರುವುದನ್ನು ನೋಡಿದ ರಿಕ್ಷಾ ಚಾಲಕ ರಹೀಂ ಬಾಲಕಿಯ ಬಳಿಕ ಬಂದು ಅವಳನ್ನು ತಬ್ಬಿಹಿಡಿದು ಮುತ್ತು ನೀಡಿದ್ದ.

    ಈತ ತಬ್ಬಿಕೊಂಡು ಮುತ್ತು ನೀಡುವಾಗ ಬಾಲಕಿ ಬೊಬ್ಬೆ ಹಾಕಿದ್ದು, ಸ್ಥಳೀಯರು ಧಾವಿಸಿ ಬರುವ ವೇಳೆ ಆರೋಪಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಘಟನೆಯ ಮಾಹಿತಿ ಸಿಕ್ಕಿದ ಕೂಡಲೇ ಕಾರ್ಯಪ್ರವೃತ್ತ ರಾದ ಪೊಲೀಸರು ಆರೋಪಿಯನ್ನು ವಶಕ್ಕೆಪಡೆದುಕೊಂಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply