ಅಮೇರಿಕಾ ಜನವರಿ 27: ಖಾಸಗಿ ಜೆಟ್ ವಿಮಾನವೊಂದು ಟೆಕ್ ಆಫ್ ವೇಳೆ ಪತನಗೊಂಡ ಘಟನೆ ಅಮೆರಿಕದ ಮೈನೆ ಬ್ಯಾಂಗೋರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ್ದು,. ಅಪಘಾತದಲ್ಲಿ 7 ಮಂದಿ ಸಾವನಪ್ಪಿದ್ದಾರೆ ಎಂದು ವರದಿಯಾಗಿದೆ.

ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (ಎಫ್ಎಎ) ಪ್ರಕಾರ, ಅಮೆರಿಕದ ಬ್ಯಾಂಗೋರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಿಮಗಾಳಿ ವೇಳೆ ಖಾಸಗಿ ಜೆಟ್ ಅಪಘಾತಕ್ಕೀಡಾಗಿದೆ. ಭಾನುವಾರ ರಾತ್ರಿ ಟೇಕ್ ಆಫ್ ಆಗುವಾಗ ಬೊಂಬಾರ್ಡಿಯರ್ ಚಾಲೆಂಜರ್ 600 ಜೆಟ್ ಅಪಘಾತಕ್ಕೀಡಾಗಿದೆ. ಆ ಸಮಯದಲ್ಲಿ, ನ್ಯೂ ಇಂಗ್ಲೆಂಡ್ ಸೇರಿದಂತೆ ಅಮೆರಿಕದ ಹಲವು ಭಾಗಗಳಲ್ಲಿ ತೀವ್ರ ಶೀತ ಮತ್ತು ಹಿಮ ಬೀಳುತ್ತಿತ್ತು. ಜೆಟ್ ಟೇಕ್ ಆಫ್ ಮಾಡಲು ಪ್ರಯತ್ನಿಸುವಾಗ ನಿಯಂತ್ರಣ ಕಳೆದುಕೊಂಡು, ಪಲ್ಟಿಯಾಗಿ ಬೆಂಕಿ ಹೊತ್ತಿಕೊಂಡಿದೆ. ಸಂಜೆ 7:45 ರ ಸುಮಾರಿಗೆ ವಾಯುನೆಲೆಯಲ್ಲಿ ಅಪಘಾತ ಸಂಭವಿಸಿದೆ. ವಿಮಾನವು ಟೇಕ್ ಆಫ್ ಕ್ಲಿಯರೆನ್ಸ್ ಪಡೆದ ಸುಮಾರು 45 ಸೆಕೆಂಡುಗಳ ನಂತರ ಅಪಘಾತ ಸಂಭವಿಸಿದೆ. .