Connect with us

DAKSHINA KANNADA

ಮಾಣಿ ಸುತ್ತಮುತ್ತ ಇಂದು ಅಪಘಾತಗಳ ಸರಮಾಲೆ

ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪ್ರಯಾಣಿಕರು ಪಾರು

ಬಂಟ್ವಾಳ ಜೂನ್ 5: ರಾಷ್ಟ್ರೀಯ ಹೆದ್ದಾರಿಯ ವಿಟ್ಲ ಪೋಲೀಸ್ ಠಾಣೆ ವ್ಯಾಪ್ತಿಯ ಮಾಣಿ ಸುತ್ತಮುತ್ತ ಇಂದು ಅಪಘಾತಗಳ ಸರಮಾಲೆಯೇ ನಡೆದಿದ್ದು, ಆದರೆ ಅದೃಷ್ಟವಶಾತ್ ಯಾವುದೇ ಅಪಾಯವಿಲ್ಲದೆ ಪ್ರಯಾಣಿಕರು ಪಾರಾಗಿದ್ದಾರೆ.

ಇಂದು ಬೆಳಿಗ್ಗೆ ಮರದ ದಿಮ್ಮಿಗಳನ್ನು ಹೊತ್ತೊಯ್ಯುತ್ತಿದ ಲಾರಿಯೊಂದು ಪಲ್ಟಿಯಾಗಿತ್ತು, ನಂತರ ರಾಷ್ರ್ಟೀಯ ಹೆದ್ದಾರಿ ಮಂಗಳೂರು ಬೆಂಗಳೂರು ರಸ್ತೆಯಲ್ಲಿ ಪೇರಮೊಗರು ಸಮೀಪ ಮಾರುತಿ 800 ಕಾರು ರಸ್ತೆ ಪಕ್ಕದ ಬೃಹತ್ ಹೊಂಡಕ್ಕೆ ಬಿದ್ದು ಜಖಂಗೊಂಡಿದೆ. ಅದರಲ್ಲಿದ್ದ ಪ್ರಯಾಣಿಕರು ಹಾಗೂ ಚಾಲಕ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಇನ್ನು ಬಂಟ್ವಾಳ ತಾಲೂಕಿನ ಮಾಣಿ ಸಮೀದ ಬುಡೋಳಿ ಜಂಕ್ಷನಲ್ಲಿ ಮಾಣಿ ಕಡೆಯಿಂದ ಬರುತ್ತಿದ್ದ ಓಮ್ನಿ ಕಾರೊಂದು ರಸ್ತೆಯಲ್ಲಿ ಮಗುಚಿದ ಪರಿಣಾಮ ಇಬ್ಬರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ನೇರಳಕಟ್ಟೆ ಸಮೀಪದ ಕೊಡಾಜೆ ಮಸೀದಿಯ ಬಳಿ ಅಪಾಯಕಾರಿ ತಿರುವಿನಲ್ಲಿ ಟ್ಯಾಂಕರ್ ಲಾರಿಯೊಂದು ರಸ್ತೆ ಪಕ್ಕಕ್ಕೆ ಮಗುಚಿ ಬಿದ್ದಿದೆ. ಈ ಘಟನೆಯಲ್ಲಿ ಭಾರೀ ಅನಾಹುತ ತಪ್ಪಿದೆ. ಒಟ್ಟಾರೆ ಇಂದು ಒಂದೇ ದಿನ ವಿಟ್ಲ ಪೋಲೀಸ್ ಠಾಣೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಸರಣಿ ಅಪಘಾತಗಳು ನಡೆದಿದ್ದು, ಯಾವುದೇ ಸಾವು ಸಂಭವಿಸಿಲ್ಲ.

Facebook Comments

comments