Connect with us

    DAKSHINA KANNADA

    ಬಾಂಗ್ಲಾ ದಲ್ಲಿ ಹಿಂದೂ,ಬೌದ್ದ,ಕ್ರಿಶ್ಚಿಯನ್ ರ ಮೇಲೆ  ಸರಣಿ ದಾಳಿ, ಡೋಂಗಿ ಜಾತ್ಯಾತೀತವಾದಿಗಳು ಈಗ ಎಲ್ಲಿ..!? ಡಾ ಭರತ್ ಶೆಟ್ಟಿ

    ಸುರತ್ಕಲ್ :  ಪ್ಯಾಲೆಸ್ಟೈನ್ ನಲ್ಲಿ ಇಸ್ರೇಲ್ ದಾಳಿ ನಡೆಸಿದಾಗ ಬೊಬ್ಬೆ ಹೊಡೆದ ಕಾಂಗ್ರೆಸ್ ನ ರಾಹುಲ್ ಗಾಂಧಿ ಹಾಗೂ ಯುಪಿಎ ಸಂಗಡಿಗರು ಇದೀಗ ಬಾಂಗ್ಲಾದಲ್ಲಿ ಆಗುತ್ತಿರುವ ಹಿಂದೂ,ಬೌದ್ದರು,ಕ್ರಿಶ್ಚಿಯನ್ ಗಳ ನರಮೇಧವನ್ನು ಖಂಡಿಸದೆ ಈಗೆಲ್ಲಿದ್ದಾರೆ, ಡೋಂಗಿ ಜಾತ್ಯಾತೀತ ವಾದಿಗಳನ್ನು ಎಲ್ಲಿ ತಲೆ ಮರೆಸಿಕೊಂಡಿದ್ದಾರೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಪ್ರಶ್ನಿಸಿದ್ದಾರೆ.

    ವಿಶ್ವದಲ್ಲಿ ಮುಸ್ಲಿಂರ ಮೇಲೆ ಮೇಲೆ ಚಿಕ್ಕ ಘಟನೆ ನಡೆದ ಕೂಡಲೇ ಬೀದಿಗಿಳಿಯುವ ಎಡಪಂಥೀಯ, ಜಾತ್ಯತೀತ ಮುಖವಾಡ ತೊಟ್ಟ ಬುದ್ದಿಜೀವಿಗಳು, ಹಿಂದೂಗಳಿಗೆ ಸದಾ ಬೋದನೆ ಮಾಡುವ ಕಪಟಿ ಜಾತ್ಯಾವಾದಿಗಳು ಮಂದಿ ಈಗೆಲ್ಲಿದ್ದಾರೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ಪ್ರಶ್ನಿಸಿದ್ದಾರೆ.
    ಬಾಂಗ್ಲಾದಲ್ಲಿ ದುರಾದೃಷ್ಟವಶಾತ್ ಘಟನೆ ನಡೆದಿದೆ.ಅದರೆ ಇದೀಗ ಹಿಂದೂಗಳ ನರಮೇಧ, ಆಸ್ತಿಗಳಿಗೆ ಹಾನಿ,ದೇವಸ್ಥಾನ ಧ್ವಂಸ ನಡೆದಿದೆ.
    ಇದಾವುದೂ ಇದೀಗ ನಮ್ಮ ದೇಶದ ಬುದ್ದಿಜೀವಿಗಳಿಗೆ ಕಾಣುತ್ತಿಲ್ಲ.ಪ್ಯಾಲಸ್ತೀನ್ ವಿಚಾರದಲ್ಲಿ ಹಗಲು ರಾತ್ರಿ ಹೇಳಿಕೆ ,ಹೋರಾಟದಲ್ಲಿ ಇದ್ದವರು ಬಾಂಗ್ಲಾದಲ್ಲಿ ಹಿಂದೂಗಳ ಮನೆಗೆ ಬೆಂಕಿ ಬಿದ್ದಾಗ ಕುರುಡಾಗಿದ್ದಾರೆ.
    ಇಲ್ಲಿನ ಅಲ್ಪ ಸಂಖ್ಯಾತ ಮುಸ್ಲಿಂ ಸಮಾಜ,ಅವರ ಸಂಘಟನೆಗಳು,
    ಬಾಂಗ್ಲಾ ಹಿಂದೂಗಳ ಮೇಲಿನ ದೌರ್ಜನ್ಯದ ಬಗ್ಗೆ ಚಕಾರ ಎತ್ತುತ್ತಿಲ್ಲ. ಹಿಂದೂಗಳ ಮೇಲಿನ ಧಾಳಿಯ ಬಗ್ಗೆ ಪ್ರಗತಿಪರರು ಐಸಿಸ್ ಮನಸ್ಥಿತಿಯ ಮತೀಯ ಶಕ್ತಿಗಳಿಗೆ ಪರೋಕ್ಷ ಬೆಂಬಲ ನೀಡುತ್ತಿರುವಂತೆ ಕಾಣುತ್ತಿದೆ ಎಂದು ಕಿಡಿಕಾರಿದ್ದಾರೆ.
    ಇದೆಲ್ಲಕ್ಕಿಂತ ಇಸ್ರೇಲ್ ದೇಶ ಮೊದಲಾಗಿ ಅಲ್ಲಿನ ಹಿಂದೂ ಸಮಾಜದ ಮೇಲಿನ ದಾಳಿ ಖಂಡಿಸುವ ಮೂಲಕ ಮತ್ತೆ ಸಹೋದರತ್ವ ವನ್ನು ತೋರಿಸಿ ಮನಗೆದ್ದಿದೆ.ದೇಶದೊಳಗಿನ ನಗರ ನಕ್ಸಲ್, ಡೋಂಗಿ ಜಾತ್ಯಾತೀತವಾದಿ ಮಂದಿಯ ಇಬ್ಬಗೆಯ ನೀತಿ,ಒಡೆದು ಆಳುವ ಮನಸ್ಥಿತಿಯ ಬಗ್ಗೆ ದೇಶದ ಜನ ಜಾಗೃತರಾಗಿರಬೇಕು ಎಂದು ಹೇಳಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply