Connect with us

    FILM

    21 ವರ್ಷ ವಯಸ್ಸಿನ ಬಂಗಾಳಿ ಕಿರುತೆರೆ ನಟಿ ನೇಣಿಗೆ ಶರಣು…!!

    ಕೊಲ್ಕತಾ ಮೇ 15: ಬಂಗಾಳಿ ಕಿರುತೆರೆ ನಟಿ ಪಲ್ಲವಿ ಡೇ ತಮ್ಮ ನಿವಾಸದಲ್ಲಿ ನೇಣಿಗೆ ಶರಣಾಗಿದ್ದಾರೆ.


    ʻಮೊನ್ ಮನೆ ನಾʼ ಸೀರಿಯಲ್‌ನ ನಲ್ಲಿ ನಟಿಸಿ ಜನಪ್ರಿಯರಾಗಿದ್ದ ಪಲ್ಲವಿ ಡೇ ಅವರಿಗೆ 21 ವರ್ಷ ವಯಸ್ಸು ಅತಿ ಕಿರಿಯ ವಯಸ್ಸಿನಲ್ಲೇ ಜನಪ್ರಿಯರಾಗಿದ್ದ ಅವರು ಇಂದು ಬೆಳಿಗ್ಗೆ ನೇಣು ಬಿಗಿದ ಸ್ಥಿತಿ ಶವ ಪತ್ತೆಯಾಗಿದ್ದು, ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದು ಪಲ್ಲವಿ ನೇಣು ಹಾಕಿಕೊಂಡಿದ್ದಾರೆ.

    ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ನಟಿಯ ಸಾವಿಗೆ ಕಾರಣವೇನು ಎಂಬುದು ತಿಳಿದು ಬಂದಿಲ್ಲ. ನಟಿ ಅಸಹಜ ಸಾವಿಗೆ ಬಂಗಾಳದ ಪೊಲೀಸರು ಪ್ರಕರಣ ದಾಖಾಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ
    ಬಂಗಾಳಿಯ `ಮೊನ್ ಮನೆ ನಾ’ ಸೇರಿದಂತೆ ಸಾಕಷ್ಟು ಸೀರಿಯಲ್‌ನಲ್ಲಿ ನಟಿಸಿದ್ದ ಪಲ್ಲವಿ ಸಾವು ಕುಟುಂಬಸ್ಥರಿಗೆ ಆಘಾತವುಂಟು ಮಾಡಿದೆ.

    Share Information
    Advertisement
    Click to comment

    You must be logged in to post a comment Login

    Leave a Reply