ರಾಧಾ ರಮಣ’, ‘ಗಾಂಧಾರಿ’ ಸೀರಿಯಲ್ ಖ್ಯಾತಿಯ ನಟಿ ಕಾವ್ಯ ಗೌಡ ಮತ್ತು ಸಂಬಂಧಿ ಜಗಳ ಮತ್ತೆ ಮುಂದುವರೆಯುವ ಸಾಧ್ಯತೆಗಳು ಹೆಚ್ಚಾಗಿದೆ.

ಕಳೆದ ಜನವರಿ ತಿಂಗಳ ಅಂತ್ಯದಲ್ಲಿ ಕಾವ್ಯ ಗೌಡ ಮನೆಯಲ್ಲಿ ಜೋರಾಗಿ ಜಗಳವೊಂದು ನಡೆದಿತ್ತು. ಈ ಕುರಿತ ಗಲಾಟೆಯ ಸಿಸಿಟಿವಿ ಸಾಕ್ಷ್ಯವನ್ನು ನಟಿ ಬಯಲು ಮಾಡಿದ್ದು ಮುಂದೇನಾಗುತ್ತೆ ಅನ್ನುವ ತೀವ್ರ ಕುತೂಹಲವನ್ನು ಮೂಡಿಸಿದೆ.
ನಟಿ ಕಾವ್ಯ ಗೌಡ ಮತ್ತು ಓರಗಿತ್ತಿ ಪ್ರೇಮಾ ಗಲಾಟೆ ಮಧ್ಯೆ ಸಹೋದರರಾದ ಸೋಮಶೇಖರ್, ನಂದೀಶ್ ಕೈ ಕೈ ಮಿಲಾಯಿಸಿದ್ದರು. ಬಳಿಕ ಈ ಪ್ರಕರಣ ಪೊಲೀಸ್ ಸ್ಟೇಷನ್ ನ ಮೆಟ್ಟಿಲೇರಿತ್ತು. ಪ್ರೇಮಾ ವಿರುದ್ಧ ಕಾವ್ಯ ಗೌಡ ದೂರು ದಾಖಲಿಸಿದ್ದರು. ಕಾವ್ಯ ಗೌಡ ಮೇಲೆ ಪ್ರೇಮಾ ಸಹ ಪ್ರತಿ ದೂರು ನೀಡಿದ್ದರು. ಈಗ ನೋಡಿದ್ರೆ, ತಮ್ಮ ಮೇಲೆ ಚಪ್ಪಲಿ ಎಸೆದಿದ್ದು, ಹಲ್ಲೆ ಮಾಡಿದ್ದು ಓರಗಿತ್ತಿ ಪ್ರೇಮಾ ಎಂಬುದಕ್ಕೆ ಸಿಸಿಟಿವಿ ಸಾಕ್ಷ್ಯ ಒದಗಿಸಿದ್ದಾರೆ ನಟಿ.
ಸಿಸಿಟಿವಿ ವಿಡಿಯೋಗಳಲ್ಲಿ ಕಾವ್ಯ ಗೌಡ ಮೇಲೆ ಪ್ರೇಮಾ ತಂಗಿ ಹಲ್ಲೆ ಮಾಡುತ್ತಿರುವುದು, ಕಾವ್ಯ ಗೌಡ ಮೇಲೆ ಪ್ರೇಮಾ ಚಪ್ಪಲಿ ಎಸೆದಿರುವುದು ಸ್ಪಷ್ಟವಾಗಿದೆ.
ನೀವು ಬರೀ ಒನ್ ಸೈಡ್ ಕಥೆ ಮತ್ತು ಸುಳ್ಳು ಆರೋಪಗಳನ್ನ ಮಾತ್ರ ಕೇಳಿದ್ದೀರಿ. ಇದೀಗ ನಾನು ಸತ್ಯವನ್ನ ಹೊರಗೆ ಹಾಕಬೇಕು. ಇದರ ಹಿಂದಿರುವ ಕ್ರೂರ ಮುಖಗಳನ್ನ ನಾನು ಹೊರಗೆ ತರಬೇಕು ಎಂದು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಕಾವ್ಯ ಬರೆದುಕೊಂಡಿದ್ದಾರೆ.
ಇಂದು ಸುದ್ದಿಗೋಷ್ಠಿ ನಡೆಸಲಿರುವ ನಟಿ ಇನ್ನಷ್ಟು ವಿಚಾರಗಳನ್ನು ಬಯಲಿಗೆಳೆಯುವುದಾಗಿ ಮಾಹಿತಿ ನೀಡಿದ್ದಾರೆ.