ಮುಂಬೈ ಜನವರಿ 08: ಚೇತರಿಕೆಯ ಹಾದಿಯಲ್ಲಿದ್ದ ಭಾರತದ ಷೇರುಮಾರಕಟ್ಟೆ ಮೇಲೆ ಟ್ರಂಪ್ ನೀಡಿದ ಒಂದು ಎಚ್ಚರಿಕೆ ಇಂದು ಷೇರು ಮಾರಕಟ್ಟೆ ನೆಲಕಚ್ಚುವಂತೆ ಮಾಡಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಸರಕುಗಳ ಮೇಲೆ ಸುಂಕ ಹೆಚ್ಚಿಸುವ ಎಚ್ಚರಿಕೆ ನೀಡಿರುವುದು ಹಾಗೂ ವಿದೇಶಿ ಹೂಡಿಕೆದಾರರು (ಎಫ್‌ಐಐ) ಸತತವಾಗಿ ಷೇರುಗಳನ್ನು ಮಾರಾಟ ಮಾಡುತ್ತಿರುವುದು ಗುರುವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಭಾರೀ ನಷ್ಟವನ್ನು ಅನುಭವಿಸಿದೆ.

ಟ್ರಂಪ್ ಅಮೇರಿಕಾದ ಅಧ್ಯಕ್ಷರಾದ ಬಳಿಕ ಭಾರತ ಷೇರು ಮಾರುಕಟ್ಟೆಯಲ್ಲಿ ಇಳಿಕೆಯ ಹಾದಿಯಲ್ಲೇ ಮುಂದುವರೆದಿದ್ದೆ. ಟ್ರಂಪ್ ಭಾರತದ ಮೇಲೆ ಹೆಚ್ಚಿನ ಸುಂಕದ ಹೇಳಿಕೆ ಗಳು ಷೇರು ಮಾರಕಟ್ಟೆ ಕುಸಿತಕ್ಕೆ ಕಾರಣವಾಗುತ್ತಿದೆ. ಇದೀಗ ಭಾರತ ಸೇರಿದಂತೆ ಕೆಲವು ರಾಷ್ಟ್ರಗಳ ಮೇಲೆ ಶೇಕಡ 500ಕ್ಕೂ ಅಧಿಕ ಸುಂಕ ವಿಧಿಸಲು ಟ್ರಂಪ್ ಮುಂದಾಗಿದ್ದು, ಇದರಿಂದಾಗಿ ಇಂದು ಷೇರುಪೇಟೆಯಲ್ಲಿ ಕುಸಿತ ಮುಂದುವರಿದಿದ್ದು, ಮಧ್ಯಾಹ್ನ 1:35ರ ಸುಮಾರಿಗೆ ಸೆನ್ಸೆಕ್ಸ್ ಬರೋಬ್ಬರಿ 698.17 ಅಂಕಗಳಷ್ಟು (ಶೇ. 0.82) ಕುಸಿದು 84,262.97ಕ್ಕೆ ತಲುಪಿದೆ. ಇತ್ತ ನಿಫ್ಟಿ ಕೂಡ 242.05 ಅಂಕಗಳಷ್ಟು (ಶೇ. 0.93) ಇಳಿಕೆ ಕಂಡು 25,898.70ಕ್ಕೆ ಬಂದು ನಿಂತಿದ್ದು, 25,900ರ ನಿರ್ಣಾಯಕ ಮಟ್ಟಕ್ಕಿಂತ ಕೆಳಗೆ ವಹಿವಾಟು ನಡೆಸುತ್ತಿದೆ.

ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ಭಾರತದ ನಡೆಯನ್ನು ವಿರೋಧಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತೀಯ ಸರಕುಗಳ ಮೇಲೆ ಹೆಚ್ಚಿನ ಸುಂಕ ವಿಧಿಸುವುದಾಗಿ ಎಚ್ಚರಿಸಿದ್ದಾರೆ. ರಷ್ಯಾದೊಂದಿಗೆ ವ್ಯಾಪಾರ ಮುಂದುವರಿಸುವ ದೇಶಗಳ ಮೇಲೆ ಬರೋಬ್ಬರಿ ಶೇ. 500 ರಷ್ಟು ಸುಂಕ ವಿಧಿಸುವ ಮಸೂದೆಗೆ ಒಪ್ಪಿಗೆ ಸಿಕ್ಕಿರುವುದು ರಫ್ತು ಆಧಾರಿತ ಟೆಕ್ಸ್‌ಟೈಲ್ ಮತ್ತು ಸೀಗಡಿ ಉದ್ಯಮದ ಷೇರುಗಳ ಪತನಕ್ಕೆ ಕಾರಣವಾಗಿದೆ



