Connect with us

MANGALORE

ಶಬರಿಮಲೆಗೆ ಮಹಿಳೆಯರ ಪ್ರವೇಶ ತಡೆಯುವುದು ಮಹಿಳೆಯರಿಗೆ ಮಾಡುವ ದ್ರೋಹ – ಜನಾರ್ಧನ ಪೂಜಾರಿ

ಶಬರಿಮಲೆಗೆ ಮಹಿಳೆಯರ ಪ್ರವೇಶ ತಡೆಯುವುದು ಮಹಿಳೆಯರಿಗೆ ಮಾಡುವ ದ್ರೋಹ – ಜನಾರ್ಧನ ಪೂಜಾರಿ

ಮಂಗಳೂರು ಜನವರಿ 7:ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ತಡೆಯುವುದು ಮಹಿಳೆಯರಿಗೆ ಮಾಡುವ ದೊಡ್ಡ ದ್ರೋಹ ಎಂದು ಕಾಂಗ್ರೇಸ್ ಹಿರಿಯ ನಾಯಕ ಬಿ. ಜನಾರ್ಧನ ಪೂಜಾರಿ ಹೇಳಿದ್ದಾರೆ.

ಮಂಗಳೂರಿನಲ್ಲಿ ಮಾಧ್ಯಮಗೊಷ್ಠಿಯಲ್ಲಿ ಮಾತನಾಡಿದ ಅವರು ಶಬರಿಮಲೆಗೆ ಮಹಿಳೆಯರ ಪ್ರವೇಶ ವಿಚಾರದಲ್ಲಿ ಈಗಾಗಲೇ ಮೂವರು ಮಹಿಳೆಯರು ಪ್ರವೇಶ ಮಾಡಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ದೇವರ ದರ್ಶನ ಪಡೆಯಲಿ ಎಂದು ಹೇಳಿದರು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮುಖ್ಯಮಂತ್ರಿಯಾಗಿ ಅವರ ಕೆಲಸ ಮಾಡಿದ್ದಾರೆ.

ರಾಜಕಾರಣಿಗಳು, ಇದರಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅದಕ್ಕಾಗಿ ಕೇರಳ ಸಿಎಂ ವಿರೋಧ ಮಾಡುವವರ ವಿರೋಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಮಹಿಳೆಯರ ಪ್ರವೇಶಕ್ಕೆ ಅಯ್ಯಪ್ಪ ಬೇಡ ಅನ್ನಲಿಲ್ಲ, ಬೇಡ ಅನ್ನುವವರು ರಾಜಕೀಯ ವ್ಯಕ್ತಿಗಳು, ರಾಜಕೀಯ ವ್ಯಕ್ತಿಗಳು ಅದರಲ್ಲಿ ಏನಾದರೂ ಮಾಡಲು ಆಗುತ್ತದೆ ಅಂತ ನೋಡುತ್ತಾರೆ ಎಂದರು.

Facebook Comments

comments