ಮಂಗಳೂರು ಸೆಪ್ಟೆಂಬರ್ 23 : ಕಾಂಗ್ರೆಸ್ ಹಿರಿಯ ಮುಖಂಡ ಅಬ್ದುಲ್ ರಹ್ಮಾನ್ ಭಟ್ಕಳ್ (72) ಮಂಗಳವಾರ ಮುಂಜಾನೆ ಹೃದಯಾಘಾತದಿಂದ ಬೆಂಗಳೂರಿನ ಫ್ರೇಜರ್ ಟೌನ್ ನಗರದ ನಿವಾಸದಲ್ಲಿ ನಿಧನರಾದರು.


ಭಟ್ಕಳ ಮೂಲದವರಾಗಿದ್ದ ಅಬ್ದುಲ್ ರಹ್ಮಾನ್ ಅವರು ಮಂಗಳೂರಿನ ಭಟ್ಕಳ ಬಜಾರ್ ನಲ್ಲಿ ವಾಸವಾಗಿದ್ದರು. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು ಕಳೆದ ಹಲವು ತಿಂಗಳುಗಳಿಂದ ಪತ್ನಿ ಜೊತೆ ಬೆಂಗಳೂರಿನಲ್ಲಿ ನೆಲೆಸಿದ್ದರು. ನೇರ ನಡೆ ನುಡಿಯ ಸರಳ ಸಜ್ಜನಿಕೆಯ ನಾಯಕರಾಗಿ ಗುರುತಿಸಿಕೊಂಡಿದ್ದ ಅವರು ಜಿಲ್ಲೆಯ ಎಲ್ಲ ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ದೂರದರ್ಶಿತ್ವ, ಶಿಸ್ತುಬದ್ಧ ಜೀವನ, ಸಜ್ಜನಿಕೆಯ ನಡವಳಿಕೆಯ ಮೂಲಕ ಕಾಂಗ್ರೆಸ್ ಮುಖಂಡರಿಗೆ ಮಾದರಿಯಾಗಿದ್ದರು. ರಾಜಕೀಯದ ಜೊತೆಗೆ ಅವರ ಸಾಮಾಜಿಕ ಸೇವೆಯೂ ಅನುಪಮವಾದುದು.
ಮೃತರು ಪತ್ನಿ, 6 ಮಂದಿ ಪುತ್ರರು, 4 ಪುತ್ರಿಯರು ಹಾಗೂ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.

Share Information