Connect with us

    LATEST NEWS

    ಸಾಮಾಜಿಕ ಅಂತರ ಮರೆತು ಕೊನೆಗೂ ನಡೆದ ದ್ವಿತೀಯ ಪಿಯುಸಿ ಪರೀಕ್ಷೆ

    ಮಂಗಳೂರು ಜೂನ್ 18: ಪಿಯುಸಿ ಇಂಗ್ಲಿಷ್ ಪರೀಕ್ಷೆ ಇಂದು ರಾಜ್ಯಾದ್ಯಂತ ನಡೆಯುತ್ತಿದ್ದು ಮಂಗಳೂರಿನಲ್ಲಿಯೂ ಬಹುತೇಕ ಕಾಲೇಜುಗಳಲ್ಲಿ ಎಕ್ಸಾಂ ನಡೆದಿದೆ. ಆದರೆ, ಅಂತರ ಕಾಯ್ದುಕೊಂಡು ಎಕ್ಸಾಂ ನಡೆಸ್ತೀವಿ ಎಂದಿದ್ದ ಸರಕಾರ ಪಿಯುಸಿ ಮಕ್ಕಳನ್ನು ನಿರ್ವಹಿಸುವಲ್ಲಿ ಎಡವಿದೆ. ಮಂಗಳೂರಿನ ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಸಾಮಾಜಿಕ ಅಂತರವನ್ನೇ ಕಾಯ್ದುಕೊಂಡಿಲ್ಲ. ಮಕ್ಕಳು ಕಾಲೇಜಿನ ಮೂಲೆ ಮೂಲೆಗಳಲ್ಲಿ ಗುಂಪು ಕೂಡಿಕೊಂಡು ಚರ್ಚಿಸುತ್ತಿದ್ದ ವಿದ್ಯಮಾನ ಕಂಡುಬಂದಿದೆ.


    ಕಾಲೇಜಿನ ಹೊರಭಾಗದಲ್ಲಿ ಸ್ಕ್ರೀನಿಂಗ್ ಮತ್ತು ಜ್ವರ ತಪಾಸಣೆ ನಡೆಸುತ್ತಿದ್ದರೂ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಕೊರೊನಾ ಸೋಂಕು ಹರಡಲು ಕಾರಣವಾಗಿದ್ದಾರೆ. ಯಾವುದೇ ವಿದ್ಯಾರ್ಥಿಗೆ ಸೋಂಕು ಇದ್ದರೂ ಜೊತೆ ಸೇರಿದವರಿಗೆ ಅಂಟಿಕೊಳ್ಳುವ ಸಾಧ್ಯತೆ ಇರುತ್ತೆ. ಹೀಗಾಗಿ ಯಾರು ಕೂಡ ಗುಂಪು ಕೂಡಬಾರದು. ಪರೀಕ್ಷೆ ಕೇಂದ್ರಗಳಲ್ಲೂ ಅಂತರ ಇರಿಸಿಕೊಂಡೇ ವಿದ್ಯಾರ್ಥಿಗಳನ್ನು ಕುಳಿತುಕೊಳ್ಳಲು ವ್ಯವಸ್ಥೆ ಮಾಡಬೇಕೆಂದು ಸೂಚಿಸಲಾಗಿತ್ತು.

    ಆದರೆ, ಮಂಗಳೂರಿನಲ್ಲಿ ಈ ನಿಯಮ ಪಾಲನೆಯೇ ಆಗಿಲ್ಲ. ದ.ಕ. ಜಿಲ್ಲೆಯ 51 ಪರೀಕ್ಷಾ ಕೇಂದ್ರಗಳಲ್ಲಿ 26,942 ಮಂದಿ ಪರೀಕ್ಷೆ ಬರೆಯಲಿದ್ದಾರೆ. ಜನ ಪೈಕಿ ಕೇರಳದಿಂದ 1043 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply