Connect with us

LATEST NEWS

ಕಡಲಕ್ಕೊರೆತಕ್ಕೆ ಸಮುದ್ರಪಾಲಾದ ರಸ್ತೆ

ಮಂಗಳೂರು ಜುಲೈ 19: ಕರಾವಳಿಯಲ್ಲಿ ಕಳೆದ 4 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಸೋಮೇಶ್ವರ, ಉಚ್ಚಿಲ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಕಡಲ್ಕೊರೆತ ಆರಂಭವಾಗಿದೆ. ಒಂದೆಡೆ ಭಾರೀ ಮಳೆಯ ಬಳಿಕ ಇದೀಗ ಕಡಲತಡಿಯ ಕುಟುಂಬಕ್ಕೆ ಕಡಲ್ಕೊರೆತದ ಭೀತಿ ಆರಂಭವಾಗಿದೆ.


ಸೋಮೇಶ್ವರ, ಉಚ್ಚಿಲ ಭಾಗದಲ್ಲಿ ಕಡಲ್ಕೊರೆತ ಹೆಚ್ಚಾಗಿದ್ದು, ಬಟ್ಟಪ್ಪಾಡಿ ಎಂಬಲ್ಲಿ ಕಡಲ್ಕೊರೆತಕ್ಕೆ ರಸ್ತೆಯೊಂದು ಕುಸಿದಿದ್ದು, ಹಲವು ಮರಗಳು ಸಮುದ್ರಪಾಲಾಗಿವೆ.

Facebook Comments

comments