ಅಯೋಧ್ಯೆಯಲ್ಲಿ ಕಳ್ಳತನದಿಂದ ವಿಗ್ರಹಗಳನ್ನು ಮಸೀದಿಯಲ್ಲಿ ಇಡಲಾಗಿದ್ದು ಅದನ್ನು ಕಿತ್ತೊಗೆಯಬೇಕು – SDPI ಮುಖಂಡ‌ ಇಲಿಯಾಸ್ ತುಂಬೆ

ಮಂಗಳೂರು ಡಿಸೆಂಬರ್ 4: ಆಯೋಧ್ಯೆಯಲ್ಲಿರುವುದು ಕಳ್ಳತನದಿಂದ ಇಟ್ಟ ವಿಗ್ರಹ, ಅದನ್ನು ಆ ಸ್ಥಳದಿಂದ ತೆರವುಗೊಳಿಸಬೇಕು, ಅಯೋಧ್ಯೆಯಲ್ಲಿ ಮಸೀದಿ ನಿರ್ಮಾಣಕ್ಕೂ ಮುನ್ನ ಎಲ್ಲಾ ಮೂರ್ತಿಗಳನ್ನು ಕಿತ್ತೊಗೆಯಬೇಕು. ಕಳ್ಳತನದಿಂದ ಇಟ್ಟ ವಿಗ್ರಹಗಳನ್ನು ಮಸೀದಿಯಲ್ಲಿ ಇಟ್ಟಿದ್ದಾರೆ ಎಂದು SDPI ಮುಖಂಡ‌ ಇಲಿಯಾಸ್ ತುಂಬೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬಾಬರಿ ಮಸೀದಿ ಪುನರ್ ನಿರ್ಮಾಣಕ್ಕಾಗಿ ಆಗ್ರಹಿಸಿ SDPI ಇಂದು ಮಂಗಳೂರಿನಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯನ್ನು ಆಯೋಜಿಸಲಾಗಿತ್ತು. ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ SDPI ಮುಖಂಡ‌ ಇಲಿಯಾಸ್ ತುಂಬೆ ರಾಮ ಹುಟ್ಟಿದ ಸಾಕ್ಷಿಗೆ ಒಂದು ಚೂರು ದಾಖಲೆ ಇಲ್ಲ, ಆದರೆ ಬಾಬರಿ ಮಸೀದಿಗೆ ಪೂರ್ತಿ ದಾಖಲೆ ಇದೆ, ಆಯೋಧ್ಯೆಯಲ್ಲಿ ಬಾಬರಿ ಮಸೀದಿ ನಿರ್ಮಾಣ ಮಾಡಿಯೇ ಸಿದ್ದ ಎಂದರು.

ಸಂಘಪರಿವಾರದವರು 1 ಲಕ್ಷ ಕರಸೇವಕರನ್ನು ಸೇರಿಸೋದಾಗಿ ಹೇಳಿದ್ದಾರೆ. ನಾವು 25 ಲಕ್ಷ ಕರಸೇವಕರನ್ನು ಸೇರಿಸುತ್ತೇವೆ, ಮತ್ತೆ ಮಸೀದಿ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದರು.

ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಎಸ್ ಡಿಪಿಐ ಮುಖಂಡ ಇಲಿಯಾಸ್ ತುಂಬೆ ಹಿಂದೂ- ಮುಸ್ಲಿಮರ ನಡುವೆ ಬಿರುಕು ಮೂಡಿಸಲು ಬ್ರಿಟೀಷರು ರಾಮಮಂದಿರ ವಿಚಾರ ಪ್ರಾರಂಭಿಸಿದರು, ಅಲ್ಲದೆ ಅದಕ್ಕೆ ಸುಳ್ಳು ದಾಖಲೆ ಸೃಷ್ಠಿಸಿದ್ದಾರೆ. ಹಿಂದೂ ಸಂಘಟನೆಗಳು ಮುಸ್ಲಿಮರ ಅಭಿಮಾನದ ಸಂಕೇತವಾದ ಬಾಬರಿ ಮಸೀದಿ ಧ್ವಂಸ ಮಾಡಿದರು. ಈಗ ಸಂಘ ಪರಿವಾರ ಒಂದು ಲಕ್ಷ ಕರಸೇವಕರೊಂದಿಗೆ ರಾಮಮಂದಿರ ನಿರ್ಮಾಣ ಮಾಡ್ತೇವೆ ಎಂದು ಹೇಳಿದ್ದಾರೆ. ಅವರು 1 ಲಕ್ಷ ಕರಸೇವಕರನ್ನು ಸೇವಕರನ್ನು ಸೇರಿಸಲಿ ನಾವು 25 ಲಕ್ಷ ಕರಸೇವಕರನ್ನೇ ಸೇರಿಸಿ ಹಿಂದೂ, ಮುಸ್ಲಿಂ, ಕ್ರೈಸ್ತರನ್ನು ಸೇರಿಸಿ ಮತ್ತೆ ಬಾಬರಿ ಮಸೀದಿ ನಿರ್ಮಾಣ ಮಾಡ್ತೇವೆ ಎಂದು ಹೇಳಿದರು.


ಪ್ರಧಾನಿ ನರೇಂದ್ರ ಮೋದಿ ನೀಡಿದ ಭರವಸೆ ಸುಳ್ಳೆಂದು ಸಾಭೀತಾದಾಗ ರಾಮಮಂದಿರ ವಿಚಾರ ತೆಗೆದುಕೊಳ್ಳುತ್ತಾರೆ. ಮುಸ್ಲಿಮರ ವಿರುದ್ಧ ಮಾತನಾಡುತ್ತಿದ್ದ ಪ್ರಭಾಕರ್ ಭಟ್ ಮೂಲೆಗುಂಪಾಗಿದ್ದಾರೆ. ಯಾವೆಲ್ಲಾ ಆರ್‌ಎಸ್‌ಎಸ್ ಶಾಖೆಯಲ್ಲಿ ಖಡ್ಗದ ತರಬೇತಿ ನೀಡುತ್ತಾರೆನ್ನುವದು ನಮಗೆ ತಿಳಿದಿದೆ. ಈ ಬಗ್ಗೆ ನಾವು ಪೊಲೀಸರಿಗೆ ಮಾಹಿತಿ ನೀಡಲು ಸಿದ್ಧರಿದ್ದೇವೆ ಎಂದು ಹೇಳಿದರು.

ಬಾಬರಿ ಮಸೀದಿಯಿದ್ದ ಸ್ಥಳದಲ್ಲೇ ರಾಮಮಂದಿರ ನಿರ್ಮಾಣಕ್ಕೆ ಆರ್ ಎಸ್ ಎಸ್ ಹೊರಟಿದ್ದಾರೆ. ನಿಮಗೆ ರಾಮಮಂದಿರ ನಿರ್ಮಾಣಕ್ಕೆ ಜಮೀನು ಬೇಕಿದ್ದರೆ ಕೇಳಿ 5 ಎಕರೆ ನಾವೇ ಖರೀದಿಸಿ ಕೊಡ್ತೇವೆ ಎಂದು ಹೇಳಿದರು. ಆದರೆ, ಮಸೀದಿಯಿರುವ ಯಾವ ಜಾಗದಲ್ಲೂ ಮಂದಿರ ನಿರ್ಮಾಣಕ್ಕೂ ಅವಕಾಶ ನೀಡಲ್ಲ ಎಂದು ಹೇಳಿದರು.

ಪ್ರತಿಭಟನಾ ಸಭೆಗೂ ಮೊದಲು ಮಂಗಳೂರಿನ ಜ್ಯೋತಿ ಸರ್ಕಲ್ ನಿಂದ ಸ್ಟೇಟ್‌ಬ್ಯಾಂಕ್‌ನಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಮುಂಭಾಗದವರೆಗೆ ಬೃಹತ್ ಪ್ರತಿಭಟನೆ ರಾಲಿಯನ್ನು ಎಸ್ ಡಿಪಿಐ ಆಯೋಜಿಸಿತ್ತು. ಈ ರಾಲಿಯಲ್ಲಿ ಬಾಬರಿ ಮಸೀದಿ ಕಟ್ಟಿಯೇ ತೀರುವೆವು ಎಂದು ಘೋಷಣೆ ಕೂಗಿದರು. ಅಲ್ಲದೆ ಕೇಂದ್ರ ಸರಕಾರದ ವಿರುದ್ಧ ಪ್ರತಿಭಟನಾಕಾರರು ಘೋಷಣೆ ಕೂಗಿದರು.

Facebook Comments

comments