Connect with us

    LATEST NEWS

    ಸ್ಥಳೀಯ ಸಂಸ್ಥೆ ಗೆಲುವು ಮುಂಬರುವ ಚುನಾವಣೆಯಲ್ಲಿ ಎಸ್ ಡಿಪಿಐ ನಿರ್ಣಾಯಕ ಶಕ್ತಿ

    ಸ್ಥಳೀಯ ಸಂಸ್ಥೆ ಗೆಲುವು ಮುಂಬರುವ ಚುನಾವಣೆಯಲ್ಲಿ ಎಸ್ ಡಿಪಿಐ ನಿರ್ಣಾಯಕ ಶಕ್ತಿ

    ಮಂಗಳೂರು ಸೆಪ್ಟೆಂಬರ್ 4: ಸ್ಥಳೀಯ ಸಂಸ್ಥೆಯ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ(SDPI)ಪಕ್ಷವು ಮೂರನೇ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ನಿರ್ಣಾಯಕ ಶಕ್ತಿಯಾಗಿದೆ.

    ಜಿಲ್ಲೆಯಲ್ಲಿ ಒಟ್ಟು 24 ವಾರ್ಡ್ ಗಳಲ್ಲಿ ಎಸ್ ಡಿ ಪಿ ಐ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಉಳ್ಳಾಲದಲ್ಲಿ 9 ವಾರ್ಡ್‍ಗಳಲ್ಲಿ ಸ್ಪರ್ಧಿಸಿದ್ದು 6 ವಾರ್ಡ್‍ಗಳನ್ನು ಗೆದ್ದುಕೊಂಡಿದೆ. ಬಂಟ್ವಾಳ ಪುರಸಭೆಯ 12 ವಾರ್ಡಿನಲ್ಲಿ ಸ್ಪರ್ಧಿಸಿದ್ದು 4 ವಾರ್ಡ್‍ಗಳಲ್ಲಿ ಗೆದ್ದುಕೊಂಡಿದೆ. ಪುತ್ತೂರು ನಗರಸಭೆಯಲ್ಲಿ 3 ವಾರ್ಡಿನಲ್ಲಿ ಸ್ಪರ್ಧಿಸಿದ್ದು 1 ವಾರ್ಡ್‌ನಲ್ಲಿ ಅಭೂತಪೂರ್ವ ಜಯ ಸಾಧಿಸಿದೆ.

    ಜಿಲ್ಲೆಯಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತಳಮಟ್ಟದಲ್ಲಿ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿರುವುದು ಈ ಚುನಾವಣಾ ಫಲಿತಾಂಶದಲ್ಲಿ ಕಂಡುಬಂದಿದೆ.

    ಈ ಚುನಾವಣಾ ಫಲಿತಾಂಶ ಮುಂಬರುವ ಮಂಗಳೂರು ಮಹಾನಗರ ಪಾಲಿಕೆ, ಬೆಳ್ತಂಗಡಿ, ಸುಳ್ಯ,ಮುಲ್ಕಿ ಮತ್ತು ಮೂಡಬಿದ್ರೆ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನವನ್ನು ಪಕ್ಷವು ಗಳಿಸುವ ಮುನ್ಸೂಚನೆಯಾಗಿದೆ ಎಂದು ಎಸ್ ಡಿ ಪಿ ಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply