LATEST NEWS
ಸಹಾಯದ ನೆಪದಲ್ಲಿ ಮದ್ಯವಯಸ್ಸಿನ ಮಹಿಳೆ ಹಾಗೂ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನ..ಎಸ್ ಡಿಪಿಐ ಮುಖಂಡನ ಮೇಲೆ ಪೋಕ್ಸೋ ಪ್ರಕರಣ ದಾಖಲು
ಮಂಗಳೂರು ಜನವರಿ 18: ಸಹಾಯದ ಹೆಸರಿನಲ್ಲಿ ಮದ್ಯ ವಯಸ್ಸಿನ ಮಹಿಳೆ ಹಾಗೂ ಆಕೆಯ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪದ ಮೇಲೆ ಎಸ್.ಡಿ.ಪಿ.ಐ ಮುಖಂಡನ ವಿರುದ್ಧ ಉಳ್ಳಾಲ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ
ಈ ಮುಖಂಡನ ವಿರುದ್ಧ ದೂರು ನೀಡಬಾರದೆಂದು ಮಹಿಳೆಗೆ ಬೆದರಿಕೆಯನ್ನೂ ಹಾಕಲಾಗಿದ್ದು, ಈ ಸಂಬಂಧವೂ ಐವರ ಮೇಲೆ ದೂರು ದಾಖಲಿಸಲಾಗಿದೆ.
ಹಿಭಾ ಫಾತಿಮಾ ಎನ್ನುವ ಮಹಿಳೆಯ ದೂರಿನ ಮೇಲೆ ಉಳ್ಳಾಲ ಪೋಲೀಸರು ಪ್ರಕರಣ ದಾಖಲಿಸಿದ್ದಾರೆ. ಬಂಟ್ವಾಳದ ಸಾಲೆತ್ತೂರಿನ ಶುಭ ಗೌರಿಯಾಗಿದ್ದ ಹಿಭಾ ಫಾತಿಮಾ ಮೂಲತ ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದು, ಕಳೆದ 15 ವರ್ಷಗಳ ಹಿಂದೆ ಈಕೆಯನ್ನು ಉಳ್ಳಾಲದ ಮಜೀದ್ ಎನ್ನುವ ವ್ಯಕ್ತಿ ವಿವಾಹವಾಗಿದ್ದರು. ಬಳಿಕ ಮುಸ್ಲಿಂ ಧರ್ಮಕ್ಲೆ ಮತಾಂತರಗೊಳಿಸಲಾಗಿತ್ತು. ಮದುವೆಯ ಬಳಿಕ ದಂಪತಿಗೆ ಇಬ್ಬರು ಮಕ್ಕಳಾಗಿತ್ತು. ಮೂರು ವರ್ಷಗಳ ಹಿಂದೆ ಈಕೆಯ ಪತಿ ಮಜೀದ್ ಆಕೆಯನ್ನು ತ್ಯಜಿಸಿ ಹೋಗಿದ್ದು, ಈಕೆ ತನ್ನ ಮಕ್ಕಳೊಂದಿಗೆ ಉಳ್ಳಾಲದ ಫ್ಲಾಟ್ ಒಂದರಲ್ಲಿ ನೆಲೆಸಿದ್ದರು.
ಈ ನಡುವೆ ಗಂಡನಿಂದ ಆದ ಅನ್ಯಾಯಕ್ಕೆ ನ್ಯಾಯ ಕೊಡಿಸುವ ನೆಪದಲ್ಲಿ ಉಳ್ಳಾಲ ಎಸ್‌ಡಿಪಿಐ ವಲಯಾಧ್ಯಕ್ಷ ಸಿದ್ಧೀಕ್ ಉಳ್ಳಾಲ್ ಎಂಬಾತ ಹಿಭಾ ಫಾತಿಮಾ ಅವರ ಸ್ನೇಹ ಸಂಪಾದಿಸಿ ಆಕೆಯ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ. ಅಲ್ಲದೆ ಆಕೆಯ 13 ವರ್ಷ ಪ್ರಾಯದ ಮಗಳ ಮೇಲೂ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿದ್ದು. ಎಸ್ ಡಿಪಿಐ ಮುಖಂಡನ ಮೇಲೆ ಪೋಕ್ಸೋ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಪೋಲೀಸ್ ಠಾಣೆಗೆ ದೂರು ನೀಡಲು ಬಂದ ಈಕೆಗೆ ಎಸ್.ಡಿ.ಪಿ.ಐ ನ ಐವರು ಮುಖಂಡರು ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಆರೋಪಿಸಲಾಗಿದ್ದು. ಈ ಹಿನ್ನಲೆ ಮಹಿಳೆ ಬೆದರಿಕೆ ಹಾಕಿದ ಮುಖಂಡರ ಮೇಲೂ ದೂರು ದಾಖಲಿಸಿದ್ದಾರೆ.